ಮತ್ತೆ ಭುಗಿಲೆದ್ದ ಪಠ್ಯವಿವಾದ..! ಸಾವರ್ಕರ್‌ ಪಠ್ಯಕ್ಕೆ ಭಾರಿ ಟೀಕೆ

masthmagaa.com:

ರಾಜ್ಯದಲ್ಲಿ ಇಷ್ಟು ದಿನ ತಣ್ಣಗಿದ್ದ ಪಠ್ಯಪುಸ್ತಕ ವಿವಾದ ಸಾವರ್ಕರ್‌ ವಿಚಾರವಾಗಿ ಮತ್ತೆ ಭುಗಿಲೆದ್ದಿದೆ. ರೋಹಿತ್ ಚಕ್ರತೀರ್ಥ ಸಮಿತಿಯಲ್ಲಿ ಪರಿಷ್ಕೃತಗೊಂಡ 8ನೇ ತರಗತಿಯ ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿರೋ ಕೆಲವು ಸಾಲುಗಳು ಚರ್ಚೆಗೆ ಗ್ರಾಸವಾಗಿವೆ. ಕೆ.ಟಿ. ಗಟ್ಟಿ ಬರೆದಿರುವ ‘ಕಾಲವನ್ನು ಗೆದ್ದವರು’ ಎಂಬ ಪ್ರವಾಸ ಕಥನದಲ್ಲಿ ಸಾವರ್ಕರ್ ಬಗ್ಗೆ ಉಲ್ಲೇಖ ಮಾಡಿರೋ ಪಠ್ಯ ವಿವಾದಕ್ಕೆ ಕಾರಣವಾಗಿದೆ. ಈ ಪ್ರವಾಸ ಕಥನದ ಒಂದು ಪ್ಯಾರಾದಲ್ಲಿ ಸಾವರ್ಕರ್‌ ಕುರಿತು ಕೋಣೆಯೊಳಗಿನ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ, ʻಕಿಂಡಿ ಕೂಡ ಇಲ್ಲದ ಆ ಕತ್ತಲ ಕೋಣೆಯಲ್ಲಿ ಸಾವರ್ಕರ್‌ ಅವರನ್ನು ಇಡಲಾಗಿತ್ತು. ಆದರೂ, ಎಲ್ಲಿಂದಲೊ ಬುಲ್‌ಬುಲ್‌ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್‌ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು’ ಅಂತ ಬರೆಯಲಾಗಿದೆ. ಇದನ್ನೇ ಈಗ ಹಲವು ಜನ ಪ್ರಶ್ನೆ ಮಾಡುತ್ತಿದ್ದು ಚಿಕ್ಕಕೋಣೆಯಿಂದ ಬುಲ್‌ ಬುಲ್‌ ರೆಕ್ಕೆಗಳೊಡನೆ ಸಾವರ್ಕರ್‌ ಹೇಗೆ ಹೊರಗೆ ಬರುತ್ತಿದ್ರು ಅಂತ ಸ್ಪಷ್ಟನೆ ಕೊಡಿ ಅಂತ ಕೇಳ್ತಿದ್ದಾರೆ.

-masthmagaa.com

Contact Us for Advertisement

Leave a Reply