ಕನ್ನಡದ ಚೆಕ್‌ ರಿಜೆಕ್ಟ್‌: 85 ಸಾವಿರ ದಂಡ!

masthmagaa.com:

ಕನ್ನಡದಲ್ಲಿ ಚೆಕ್‌ ಬರೆದಿರೋದಕ್ಕೆ ಬ್ಯಾಂಕಿನ ಸಿಬ್ಬಂದಿ ಚೆಕ್‌ ಅನ್ನ ರಿಜೆಕ್ಟ್‌ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಹಳಿಯಾಳದಲ್ಲಿ ವ್ಯಕ್ತಿಯೊಬ್ಬರು ತಮ್ಮ ಖಾತೆಯಲ್ಲಿದ್ದ ಹಣ ತೆಗೆಯೋಕೆ SBI ಬ್ಯಾಂಕಿಗೆ ಹೋಗಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ಇದನ್ನ ರಿಜೆಕ್ಟ್‌ ಮಾಡಿದ್ದಾರೆ. ಇದರ ವಿರುದ್ದ ಧಾರವಾಡದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಲಾಗಿದ್ದು ಬ್ಯಾಂಕ್‌ಗೆ ಈಗ ಸುಮಾರು 85 ಸಾವಿರ ದಂಡ ಹಾಕಲಾಗಿದೆ.

-masthmagaa.com

Contact Us for Advertisement

Leave a Reply