ಕನ್ನಡತಿ ಕಿರಣ್ ರಾಜ್ ಪ್ರಯಾಣಿಸಬೇಕಿದ್ದ ಟ್ರಕ್ ವಿದ್ಯುತ್ ಕಂಬ ಬಿದ್ದು ಜಖಂ!

masthmagaa.com:

ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಅಭಿನಯದ ಬಡ್ಡೀಸ್ ಚಿತ್ರ ಮುಂದಿನ ವಾರ 24ನೇ ತಾರೀಖು ಬಿಡುಗಡೆ ಆಗಲಿದ್ದು ಸಧ್ಯಕ್ಕೆ ಚಿತ್ರದ ಪ್ರಮೋಶನಲ್ ಚಟುವಟಿಕೆಗಳು ಬಿರುಸಾಗಿ ಸಾಗುತ್ತಿದೆ. ಪ್ರಮೋಷನ್ ಅಂಗವಾಗಿ ಕಿರಣ್ ರಾಜ್ ಸೇರಿದಂತೆ ಇಡೀ ಚಿತ್ರತಂಡ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದೆ.

ನಿನ್ನೆ ಮೂಡಲಗಿ ಮತ್ತು ಗೋಕಾಕ್ ನಲ್ಲಿ ಪ್ರಮೋಷನ್ ಮುಗಿಸಿಕೊಂಡು ಬಡ್ಡೀಸ್ ತಂಡ ಬೆಳಗಾವಿ ಮಾರ್ಗವಾಗಿ ದಾವಣಗೆರೆಗೆ ಹೋಗಬೇಕಾದರೆ ಟೀ ಬ್ರೇಕ್ ಗೋಸ್ಕರ ಗಾಡಿಯನ್ನ ಒಂದು ಬದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ಆ ಸಮಯದಲ್ಲಿ ಹಳೆ ವಿದ್ಯುತ್ ಕಂಬ ಪ್ರಮೋಷನ್ ಗಾಡಿ ಮೇಲೆ ಬಿದ್ದಿದೆ. ಕಂಬ ಬಿದ್ದ ರಭಸಕ್ಕೆ ಟ್ರಕ್ ಜಖಂ ಗೊಂಡಿದೆ.

ಅದೃಷ್ಟವಶಾತ್ ಯಾರು ಕೂಡ ಗಾಡಿಯಲ್ಲಾಗಲಿ, ಪಕ್ಕಾದಲ್ಲಾಗಲಿ ಇರಲಿಲ್ಲ. ಹಾಗಾಗಿ ಯಾರಿಗೂ ಕೂಡ ಪ್ರಾಣಹಾನಿ ಆಗಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.

-masthmagaa.com

 

Contact Us for Advertisement

Leave a Reply