ಅಮೂಲ್-ನಂದಿನಿ ವಿಲೀನಗೊಳಿಸುವ ಅಮಿತ್‌ ಶಾ ಹೇಳಿಕೆಗೆ ರಾಜ್ಯದಲ್ಲಿ ಆಕ್ಷೇಪ!

masthmagaa.com:

ಗುಜರಾತ್‌ನ ಅಮುಲ್‌ ಜೊತೆಗೆ ಕರ್ನಾಟಕ ಹಾಲು ಮಹಾಮಂಡಳಿ (KMF- ನಂದಿನಿ)ಯನ್ನ ಒಂದುಗೂಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಮುಲ್ ಹಾಗೂ ನಂದಿನಿ ಒಂದಾದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಅಂತ ಅಮಿತ್‌ ಶಾ ಹೇಳಿದ್ದಾರೆ. ಆದರೆ ಅವ್ರ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಅಮುಲ್‌ ಇಲ್ಲದೆಯೂ KMF ಉತ್ತಮ ರೀತಿಯಲ್ಲಿ ಅಭಿವೃದ್ದಿಯಾಗುತ್ತೆ. ಅಮುಲ್‌ಗೆ ನಂದಿನಿ ಒಳ್ಳೆ ಪ್ರತಿಸ್ಪರ್ಧಿಯಾಗುತ್ತೆ ಹೊರತು ಅಂಗಸಂಸ್ಥೆಯಲ್ಲ.. ಅಂತ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದಾರೆ. ಇತ್ತ KMFನ ಸ್ವಾಯತ್ತತೆಗೆ ಧಕ್ಕೆಯಾಗಬಾರ್ದು. ಬ್ಯಾಂಕ್‌ ಆಫ್‌ ಬರೋಡಾದ ಜೊತೆ ಸೇರಿದ ವಿಜಯಾ ಬ್ಯಾಂಕ್‌ ಹಾಗೂ SBI ಜೊತೆ ವಿಲೀನವಾದ SBM ಬ್ಯಾಂಕ್‌ಗಳ ನೂರಾರು ವರ್ಷಗಳ ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ ಅಂತ ಕನ್ನಡಪರ ಚಿಂತಕರೂ ಅಭಿಪ್ರಾಯ ಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply