ಆಸ್ಕರ್‌ ರೇಸ್‌ನಲ್ಲಿ ಈ ಸಿನಿಮಾಗಳ ಸ್ಪರ್ಧೆ! ಮತ್ತೊಂದು ದಾಖಲೆಗೆ ಸಿದ್ಧವಾದ ಕಾಂತಾರ!

masthmagaa.com:

ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ʻಕಾಂತಾರʼ ಸಿನಿಮಾ ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸೋ ಸೂಚನೆ ನೀಡಿದೆ. ಕಾಂತಾರ ಈಗ ಆಸ್ಕರ್‌ ರೇಸ್‌ಗೆ ಎಂಟ್ರಿ ಕೊಟ್ಟಿದ್ದು, ಅರ್ಹತಾ ಸುತ್ತನ್ನ ಪಾಸ್‌ ಮಾಡಿದೆ. ಅಂದ್ರೆ ಆಸ್ಕರ್‌ ಸದಸ್ಯರು ಮತ ಚಲಾಯಿಸಿದ್ರೆ ಕಾಂತಾರ ಸಿನಿಮಾ ಮುಖ್ಯ ನಾಮಿನೇಷನ್‌ಗೆ ಎಂಟ್ರಿ ಕೊಡಲಿದೆ. ಈ ಅರ್ಹತೆ ಪಡೆಯಲು, ಸಿನಿಮಾವೊಂದು ಅಮೆರಿಕದ 6 ಮೆಟ್ರೋಪಾಲಿಟನ್‌ ನಗರಗಳಲ್ಲಿ ಎಲ್ಲಾದರೂ ಕನಿಷ್ಠ ಒಂದು ಕಡೆ ಜನವರಿ 1 ರಿಂದ ಡಿಸೆಂಬರ್‌ 31ರ ನಡುವೆ ಸತತ 7 ದಿನ ಒಂದೇ ಜಾಗದಲ್ಲಿ ಓಡಿರ್ಬೇಕಿತ್ತು. ಈ ಸಾಧನೆ ಮಾಡಿರೋದಕ್ಕೆ ಕಾಂತಾರ, ಈ ಬಾರಿ ಆಸ್ಕರ್‌ಗೆ ಸ್ಪರ್ಧಿಸಲು ಅರ್ಹತೆ ಪಡೆದಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ .‘ಕಾಂತಾರ ಸಿನಿಮಾ 2 ಆಸ್ಕರ್ ಅರ್ಹತೆ ಪಡೆದಿರೋ ವಿಚಾರ ತಿಳಿಸಲು ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಅಂತ ತಿಳಿಸಿದೆ. ಅದೇ ರೀತಿ ಸುದೀಪ್‌ ನಟನೆಯ ʻವಿಕ್ರಾಂತ್‌ ರೋಣʼ ಸಿನಿಮಾ ಕೂಡ ಆಸ್ಕರ್‌ ಅರ್ಹತೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇತ್ತ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತಾದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕೂಡ ಆಸ್ಕರ್‌ ರೇಸ್‌ನಲ್ಲಿ ಸ್ಪರ್ಧಿಸುತ್ತಿದೆ. ಇದ್ರಲ್ಲಿ ಒಟ್ಟು 301 ಚಿತ್ರಗಳು ಸ್ಥಾನ ಪಡೆದಿವೆ.

-masthmagaa.com

Contact Us for Advertisement

Leave a Reply