ಬೆಂಗಳೂರಿನಲ್ಲಿ ಜೋರಾಯ್ತು ನಾಮಫಲಕ ಕಾವು: ಭಾರಿ ಪ್ರತಿಭಟನೆ

masthmagaa.com:

ರಾಜಧಾನಿ ಬೆಂಗಳೂರಿನ ಕನ್ನಡದ ಕೂಗು ದೇಶವೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ನಾಮಫಲಕ ಕಡ್ಡಾಯ ಮಾಡ್ಬೇಕು ಅಂತ ಕನ್ನಡಪರ ಸಂಘಟನೆಗಳು ಮತ್ತೊಮ್ಮೆ ಬೀದಿಗಿಳಿದಿವೆ. ಈ ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗಿ ಹಲವು ನಾಯಕರು ಅರೆಸ್ಟ್‌ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಅಥ್ವಾ ಕರವೇ ಅಧ್ಯಕ್ಷ ನಾರಾಯಣ ಗೌಡ ಸೇರಿ ಹಲವು ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಅರೆಸ್ಟ್‌ಗೂ ಮೊದಲು ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣ ಗೌಡ, ಬೆಂಗಳೂರಿನ ಮಾಲ್‌ ಆಫ್‌ ಏಷ್ಯಾ ಸೇರಿ ಹಲವು ಮಾಲ್‌ಗಳು ಕಡ್ಡಾಯ ಕನ್ನಡ ನಾಮಫಲಕದ ರೂಲ್ಸ್ ಫಾಲೋ ಮಾಡ್ತಿಲ್ಲ. ಪೊಲೀಸರು ಇವರಿಗೆ ರಕ್ಷಣೆ ಕೊಡ್ತಿರ್ಬೋದು ಅಂತ ಆರೋಪಿಸಿದ್ರು. ಬುಧವಾರ ಬೆಳಿಗ್ಗೆ ಈ ವಿಚಾರವಾಗಿ ಕರವೇ ಕಾರ್ಯಕರ್ತರೂ ಪ್ರತಿಭಟನಾ ರ‍್ಯಾಲಿ ನಡೆಸಿದ್ರು. ಏರ್‌ಪೋರ್ಟ್‌ ರಸ್ತೆಯಿಂದ ಕಬ್ಬನ್‌ ಪಾರ್ಕ್‌ ವರೆಗೆ ಈ ರ‍್ಯಾಲಿ ನಡೆದಿದೆ. ಅಲ್ಲದೆ ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ ಸೇರಿದಂತೆ ನಗರದ ವಿವಿಧ ವ್ಯಾಪಾರ ಕೇಂದ್ರಗಳಲ್ಲಿ ರ‍್ಯಾಲಿ ನಡೆಸಲಾಗಿದೆ. ಅಲ್ಲದೆ ಲಾವೆಲ್‌ ರೋಡ್‌, ಯುಬಿ ಸಿಟಿ ಸುತ್ತ ಮುತ್ತಲ ಪ್ರದೇಶಗಳಲ್ಲಿ ಇಂಗ್ಲಿಷ್‌ ಬೋರ್ಡ್‌ಗಳಿಗೆ ಕಪ್ಪು ಬಣ್ಣ ಬಳಿದು, ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ಅಂದ್ಹಾಗೆ ಡಿಸೆಂಬರ್‌ 26ರಂದು ಬೋರ್ಡ್‌ಗಳಲ್ಲಿ 60% ಕನ್ನಡ ಪದಗಳನ್ನ ಕಡ್ಡಾಯವಾಗಿ ಬಳಸಬೇಕು ಅಂತ BBMP ಆದೇಶ ನೀಡಿದೆ. ಇದಕ್ಕಾಗಿ 15 ದಿನಗಳ ಗಡುವನ್ನೂ ನೀಡಿದೆ. ಆದ್ರೆ ಇಂದು ನಡೆಯುತ್ತಿದ್ದ ರ‍್ಯಾಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರಾಜಧಾನಿ ಅಸ್ತವ್ಯಸ್ತಗೊಂಡಿದೆ. ಕರವೇ ಅಧ್ಯಕ್ಷರು ಕಾನೂನು ಸುವ್ಯವಸ್ಥೆ ಹಾಳು ಮಾಡ್ಬೇಡಿ ಅಂತ ಕಾರ್ಯಕರ್ತರಿಗೆ ಮನವಿ ಮಾಡ್ತೇನೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply