ಮಾರ್ಚ್‌ 29 ರಿಂದ 19 ಲಕ್ಷ ಲೀಟರ್‌ ಲಿಕ್ಕರ್‌ ಹಾಗೂ 113 ಕೋಟಿ ಹಣ ವಶಕ್ಕೆ ಪಡೆದ ಅಧಿಕಾರಿಗಳು!

masthmagaa.com:

ಚುನಾವಣೆ ಹತ್ತಿರ ಆಗ್ತಿದ್ದಂತೆ ಓಟ್‌ಗಾಗಿ ನೋಟು ಹಾಗೂ ಮದ್ಯ ನೀಡುವ ಅಭ್ಯರ್ಥಿಗಳ ವಿರುದ್ದ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಮಾರ್ಚ್‌ 29ರಿಂದ ಈವರೆಗೆ ಒಟ್ಟು 19 ಲಕ್ಷ ಲೀಟರ್‌ ಲಿಕ್ಕರ್‌ ಹಾಗೂ 113 ಕೋಟಿ ಹಣವನ್ನ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಮತದಾರರಿಗೆ ಆಮಿಷ ಒಡ್ಡಲು ಸಾಗಾಟ ಮಾಡ್ತಿದ್ದ 22.36 ಕೋಟಿ ಮೌಲ್ಯದ ಉಡುಗೊರೆಗಳನ್ನ ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಉಡುಗೊರೆಗಳ ಜೊತೆಗೆ 76.05 ಕೋಟಿ ಮೌಲ್ಯದ 149 ಕೆಜಿ ಬಂಗಾರ, 4.48 ಕೋಟಿ ಮೌಲ್ಯದ 644.54 ಕೆಜಿ ಬೆಳ್ಳಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply