ಹಬ್ಬದ ನಿಮಿತ್ತ ಖಾಸಗಿ ಬಸ್‌ಗಳ ದರ 10 ಪಟ್ಟು ಹೆಚ್ಚಳ!

masthmagaa.com:

ರಾಜ್ಯಾದ್ಯಂತ ದೀಪಾವಳಿ ಆಚರಿಸೋಕೆ ಊರುಗಳಿಗೆ ಹೋಗ್ತಿರೊ ಜನರನ್ನ ಗುರಿಯಾಗಿಸಿಕೊಂಡು ಕೆಲ ಖಾಸಗಿ ಬಸ್ ಟ್ರಾವೆಲ್‌ಗಳು ಟಿಕೆಟ್‌ ದರವನ್ನ ವಿಪರೀತವಾಗಿ ಏರಿಕೆ ಮಾಡಿವೆ. ವಿಮಾನದ ಟಿಕೆಟ್‌ಗಳಿಗಿಂತಲೂ ಹೆಚ್ಚಿನ ಬೆಲೆ ಏರಿಸಿ, ಜನರನ್ನ ಸುಲಿಗೆ ಮಾಡ್ತಿವೆ. ಬೆಂಗಳೂರಿನಿಂದ ಹುಬ್ಬಳ್ಳಿ, ಗೋವಾ, ಕಾರವಾರ, ಬೆಳಗಾವಿ ಸೇರಿದಂತೆ ಹಲವು ಪ್ರಯಾಣದ ದರಗಳು ಗಗನಕ್ಕೇರಿವೆ. ಬೆಂಗಳೂರು-ಹುಬ್ಬಳ್ಳಿಗೆ ಹೋಗೊ ಬಸ್‌ಗಳ ದರ ಸಾಮಾನ್ಯವಾಗಿ 500ರಿಂದ 800 ರೂಪಾಯಿ ಇರುತ್ತೆ. ಆದ್ರೆ ಹಬ್ಬದ ನೆಪದಲ್ಲಿ ಈ ದರವನ್ನ 5000 ಕ್ಕೆ ಏರಿಸಲಾಗಿದೆ. ಅಂದ್ಹಾಗೆ ಬೆಂಗಳೂರಿನಿಂದ ಹುಬ್ಬಳ್ಳಿ ನಡುವಿನ ವಿಮಾನಯಾನಕ್ಕೆ 3,694 ರೂಪಾಯಿ ದರವಿದೆ.

-masthmagaa.com

Contact Us for Advertisement

Leave a Reply