ಕೇರಳದ ಮನವಿಯೆಲ್ಲವನ್ನೂ ನಿರಾಕರಿಸಿದ ಬೊಮ್ಮಾಯಿ ಸರ್ಕಾರ!

masthmagaa.com:

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇಂದು ಸಿಎಂ ಬಸವರಾಜ ಬೊಮ್ಮಾಯಿಯನ್ನ ಭೇಟಿಯಾಗಿದ್ದಾರೆ. ಗೃಹ ಕಛೇರಿ ಕೃಷ್ಣಾದಲ್ಲಿ ಉಭಯ ನಾಯಕರು ಮೀಟ್‌ ಆಗಿದ್ದು ಎರಡೂ ರಾಜ್ಯಗಳ ಸಹಕಾರ ಕುರಿತಾಗಿ ಚರ್ಚೆ ನಡೆಸಲಾಗಿದೆ. ಸಭೆ ಬಳಿಕ ಮಾತನಾಡಿದ ಬೊಮ್ಮಾಯಿ ಕಾಣಿಯೂರು ರೈಲು ಮಾರ್ಗ ಸೇರಿದಂತೆ ಎರಡ್ಮೂರು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೀವಿ. ರಾಜ್ಯದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ, ವನ್ಯಜೀವಿಧಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನ ನಡೆಸೋಕೆ ಸಾಧ್ಯವಿಲ್ಲ ಅಂತ ಕೇರಳ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದೀವಿ ಅಂತ ಹೇಳಿದ್ರು. ಅಂದ್ಹಾಗೆ ಕಂಜಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೇ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತ ನೀಡುವಂತೆ ಕೇರಳ ಸರ್ಕಾರ ಕೋರಿತ್ತು. ಈ ಕಂಜಂಗಾಡ್-ಕಾಣಿಯೂರು ರೈಲು ಮಾರ್ಗ ಸುಳ್ಯ ಭಾಗದಲ್ಲಿ ಬರುತ್ತದೆ. ಆದರೆ, ಇದು ಜೀವ ವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಹಾದು ಹೋಗುವ ಕಾರಣ ಅದಕ್ಕೆ ಒಪ್ಪಿಗೆ ಕೊಡೋಕೆ ಸಾಧ್ಯವಿಲ್ಲ ಅಂತ ಹೇಳಿದ್ದೀವಿ ಅಂತ ಸಿಎಂ ಬೊಮ್ಮಾಯಿ ಹೇಳಿದ್ರು. ಇನ್ನು ಹಳೆಯ ಯೋಜನೆಯಾಗಿರೋ ತಲಚೇರಿ-ಮೈಸೂರು ರೈಲು ಯೋಜನೆಯನ್ನೂ ಕೇರಳ ಸರ್ಕಾರ ಪ್ರಸ್ತಾಪ ಮಾಡ್ತು. ಆದರೆ ಈ ಯೋಜನೆಯ ರೈಲು ಮಾರ್ಗ ಬಂಡಿಪುರ-ನಾಗರಹೊಳೆಯ ಮಧ್ಯಭಾಗದಲ್ಲೇ ಹಾದುಹೋಗುವುದರಿಂದ ಅದಕ್ಕೂ ನಾವು ಅನುಮತಿ ನೀಡಲಿಲ್ಲ..ಇದ್ರ ಜೊತೆಗೆ ಅಂಡರ್‌ಗ್ರೌಂಡ್‌ ರೈಲು ಮಾರ್ಗ ನಿರ್ಮಿಸ್ತೀವಿ ಅಂತ ಕೇರಳ ಸರ್ಕಾರ ಮನವಿ ಮಾಡ್ತು. ಅದಕ್ಕೂ ನಾವು ಅನುಮತಿ ಕೊಡಲಿಲ್ಲ ಸಿಎಂ ಬೊಮ್ಮಾಯಿ ಹೇಳಿದ್ರು.

-masthmagaa.com

Contact Us for Advertisement

Leave a Reply