ರಾಜ್ಯದ ಶಾಲೆಗಳಲ್ಲಿ ಬಿಸಿಯೂಟದಲ್ಲಿ ಭಾರೀ ಬದಲಾವಣೆ!

masthmagaa.com:

ಶಾಲೆಗಳಲ್ಲಿ ಮಧ್ಯಾಹ್ನದ ಊಟದ ವೇಳೆ ವಿದ್ಯಾರ್ಥಿಗಳ ನಡುವೆ ಪ್ಲೇಟ್‌ಗಾಗಿ ಹಾಗೂ ಕೈ ತೊಳೆಯೋವಾಗ ಉಂಟಾಗೊ ನೂಕಾಟ ತಡೆಗಟ್ಟಲು ರಾಜ್ಯ ಸರ್ಕಾರ ಬಿಸಿಯೂಟದ ಸಮಯವನ್ನ ಬದಲಾಯಿಸಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸುತ್ತೋಲೆಯನ್ನ ಹೊರಡಿಸಿದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 1 ಗಂಟೆಯಿಂದ 1.45ರ ನಡುವೆ ಹಾಗೂ 6 ರಿಂದ10ನೇ ತರಗತಿ ವಿದ್ಯಾರ್ಥಿಗಳಿಗೆ 2 ಗಂಟೆಯಿಂದ 2.40ರ ನಡುವೆ ಊಟಕ್ಕೆ ಬಿಡುವಂತೆ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply