ಧಾರ್ಮಿಕ ಹಬ್ಬ ಆಚರಣೆಗೆ ಮತ್ತೆ ಅಸ್ತು: ಹೊತ್ತಿದ ಘೋಷವಾಕ್ಯ ಕಿಡಿ!

masthmagaa.com:

ರಾಜ್ಯದ ಸರ್ಕಾರಿ ವಸತಿ ಶಾಲೆ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಬ್ರೇಕ್‌ ಹಾಕಿದ್ದ ಆದೇಶವನ್ನ ಸರ್ಕಾರ ಹಿಂಪಡೆದಿದೆ. ಈ ವಿಚಾರದಲ್ಲಿ ವಿವಾದ ಹುಟ್ಕೊಳ್ತಿದ್ದಂತೆ ಇದೀಗ ಆದೇಶವನ್ನ ಸರ್ಕಾರವೇ ಹಿಂಪಡೆದಿದೆ. ಆದ್ರೆ ವಸತಿ ಶಾಲೆಗಳಲ್ಲಿನ ಘೋಷವಾಕ್ಯಗಳನ್ನ ರಾಜ್ಯಸರ್ಕಾರ ಬದಲಾಯಿಸಿದೆ. ಅದ್ರಲ್ಲೂ ಪ್ರಮುಖವಾಗಿ ರಾಷ್ಟ್ರ ಕವಿ ಕುವೆಂಪು ಅವ್ರ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಅನ್ನೊ ಘೋಷ ವಾಕ್ಯವನ್ನ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಅಂತ ಬದಲಿಸಿ ವಸತಿ ಶಾಲೆಗಳಲ್ಲಿ ಫಲಕ ಹಾಕಲಾಗಿದೆ. ಸರ್ಕಾರದ ಈ ಕ್ರಮಕ್ಕೆ ಸದನದಲ್ಲಿ ಬಿಜೆಪಿ ವಿರೋಧ ವ್ಯಕ್ತ ಪಡಿಸಿದೆ. ವಿಪಕ್ಷ ನಾಯಕ R ಅಶೋಕ್‌ ರಾಜ್ಯ ಸರ್ಕಾರ ತುಘಲಕ್‌ ದರ್ಬಾರ್‌ ನಡೆಸ್ತಿದೆ ಅಂತ ವಾಗ್ದಾಳಿ ನಡೆಸಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಮಾಜ ಕಲ್ಯಾಣ ಇಲಾಖೆ ಸಚಿವ HC ಮಹಾದೇವಪ್ಪ, ʻನಾವು ಕುವೆಂಪು ಅವ್ರ ಘೋಷವಾಕ್ಯ ಬದಲಾವಣೆ ಮಾಡಿಲ್ಲ, ಪ್ರಶ್ನೆ ಮಾಡಿ ಅಂತ ಹೇಳೋದು ತಪ್ಪಾ? ಅದು ನಮ್ಮ ಸಂವಿಧಾನ ಬದ್ದ ಹಕ್ಕು’ ಅಂತ ಈ ಕ್ರಮದ ಬಗ್ಗೆ ಸಮರ್ಥನೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply