ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣರನ್ನ ಅನರ್ಹಗೊಳಿಸಿದ ಹೈಕೋರ್ಟ್‌! ಯಾಕೆ?

masthmagaa.com:

ಚುನಾವಣಾ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ ಅರೋಪದ ಮೇಲೆ ಹಾಸನ ಸಂಸದ ಸ್ಥಾನದಿಂದ ಪ್ರಜ್ವಲ್‌ ರೇವಣ್ಣ ಅವರನ್ನು ಕರ್ನಾಟಕ ಹೈಕೋರ್ಟ್‌ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಜ್ವಲ್ ರೇವಣ್ಣ ಅವರು ಮೊದಲ ಪ್ರಯತ್ನದಲ್ಲೇ ಜಯ ಗಳಿಸಿದ್ದರು. ಆದರೆ ಅಫಿಡವಿಟ್​ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಅಂತ ಒತ್ತಾಯಿಸಿ ಮಾಜಿ ಬಿಜೆಪಿಗ ಹಾಲಿ ಜೆಡಿಎಸ್‌ ಶಾಸಕರಾಗಿರುವ ಎ.ಮಂಜು 2019ರಲ್ಲಿ ಅರ್ಜಿ ಹಾಕಿದ್ರು. ಇದೀಗ ಹೈಕೋರ್ಟ್‌ ಪ್ರಜ್ವಲ್‌ ಅವ್ರನ್ನ ಅನರ್ಹಗೊಳಿಸಿ ತೀರ್ಪು ನೀಡಿದೆ. ಈ ಆದೇಶದಿಂದ 6 ವರ್ಷಗಳ ಕಾಲ ಪ್ರಜ್ವಲ್‌ ರೇವಣ್ಣ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಅಂತ ದೂರದಾರ ಪರ ಲಾಯರ್‌ ಹೇಳಿದ್ದಾರೆ. ಇನ್ನು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. ಇತ್ತ ದೂರುದಾರ ಎ ಮಂಜು ಅವರಿಗೂ ಸಂಕಷ್ಟ ಎದುರಾಗಿದೆ. ಆಗ ಬಿಜೆಪಿಯಲ್ಲಿದ್ದ ಎ ಮಂಜು ಅವರ ವಿರುದ್ಧ ಪ್ರಜ್ವಲ್‌ ರೇವಣ್ಣ ಕೂಡ ಮರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನ ವಿಚಾರಣೆ ನಡೆಸಿರುವ ಹೈಕೋರ್ಟ್‌ ಮಂಜು ಕೂಡ ಚುನಾವಣಾ ಅಕ್ರಮ ಎಸಗಿದ್ದಾರೆ ಅಂತ ಅಭಿಪ್ರಾಯಪಟ್ಟಿದೆ. ಅದಲ್ಲದೇ ನಿಮ್ಮನ್ನು ಯಾಕೆ ಅನರ್ಹಗೊಳಿಸಬಾರದು ಅಂತ ನೋಟಿಸ್‌ ನೀಡಿದೆ. ಇದಕ್ಕೆ ಎ ಮಂಜು ಅವರು ಸಮರ್ಪಕ ಉತ್ತರ ನೀಡಬೇಕಿದ್ದು. ಇಲ್ಲದಿದ್ದರೆ ಎ ಮಂಜು ಅವರನ್ನೂ ಅನರ್ಹಗೊಳಿಸುವ ಸಾಧ್ಯತೆ ಇದೆ. ಅಲ್ದೆ ಜೆಡಿಎಸ್‌ ಶಾಸಕ ಎಚ್‌ಡಿ ರೇವಣ್ಣ ಅವರಿಗೂ ಹೈಕೋರ್ಟ್‌ ನೋಟಿಸ್‌ ನೀಡಿದೆ. ಪ್ರಜ್ವಲ್‌ ರೇವಣ್ಣ ಅವರ ಚುನಾವಣಾ ಅಕ್ರಮಕ್ಕೆ ಸಹಕರಿಸಿದ ಅರೋಪದಲ್ಲಿ ರೇವಣ್ಣ ಅವರಿಗೆ ನೋಟಿಸ್‌ ನೀಡಲಾಗಿದೆ ಅಂತ ದೂರುದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ. ಈ ಮೂಲಕ ಜೆಡಿಎಸ್‌ನಲ್ಲಿ ಇದ್ದ ಏಕೈಕ ಲೋಕಸಭೆ ಸಂಸದ ಸ್ಥಾನವೂ ಖಾಲಿಯಾದಂತಾಗಿದೆ. ಆ ಕಡೆ ಎ ಮಂಜು ಹಾಗೂ ರೇವಣ್ಣ ಅವರೂ ತಪ್ಪಿತಸ್ಥರು ಅಂತ ತೀರ್ಪು ಬಂದ್ರೆ ವಿಧಾನಸಭೆಯಲ್ಲಿ ಜೆಡಿಎಸ್‌ ಸೀಟು 19ರಿಂದ 17 ಸ್ಥಾನಕ್ಕೆ ಕುಸಿಯಲಿದೆ. ಇತ್ತ ಅನರ್ಹತೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಜ್ವಲ್‌, ಈ ಬಗ್ಗೆ ತಂದೆ ರೇವಣ್ಣ ಹಾಗೂ ತಾತ ಮಾಜಿ ಪ್ರಧಾನಿ ಎಚ್‌ ಡಿ ದೇವೆಗೌಡ ಅವರ ಬಳಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply