ಉದ್ವಿಗ್ನಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಸಮುದಾಯಗಳಿಂದ ಶಾಂತಿ ಸಂಧಾನದ ಸಭೆ!

masthmagaa.com:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕೊಲೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಜನಪ್ರತಿನಿಧಿಗಳು ಪ್ರಚೋದನಕಾರಿ ಭಾಷಣ ನಿಲ್ಲಿಸುವ ಹಾಗೂ ಮಾಧ್ಯಮಗಳಲ್ಲಿ ಕೊಲೆ ಕುರಿತು ವಿಜೃಂಬಿಸಿ ಪ್ರಸಾರ ಮಾಡೋದ್ರ ಬಗ್ಗೆ ಕೂಡ ಚರ್ಚೆ ಮಾಡಲಾಗಿದೆ ಅಂತ ಹೇಳಲಾಗಿದೆ. ಇನ್ನು ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರ್‌ ಹತ್ಯೆಯನ್ನ ಖಂಡಿಸಿ ಇಂದೂ ಕೂಡ ಬಿಜೆಪಿಯ ಹಲವು ಜನಪ್ರತಿನಿಧಿಗಳು ರಾಜೀನಾಮೆ ನೀಡಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಪ್ರವೀಣ್‌ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ಎಬಿವಿಪಿ ಕಾರ್ಯಕರ್ತರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸದೆದುರು ಬೃಹತ್‌ ಪ್ರತಿಭಟನೆ ನಡೆಸಿದ್ದು ಈ ವೇಳೆ ಭಾರಿ ಹೈಡ್ರಾಮ ಕೂಡ ಕಂಡು ಬಂದಿತ್ತು. ಪ್ರವೀಣ್‌ ನೆಟ್ಟಾರ್‌ ಜೊತೆಗೆ ಮೊನ್ನೆಯಷ್ಟೇ ಮುಸ್ಲಿಂ ಹುಡುಗನ ಕೊಲೆ ಆಗಿದೆ. ಅವರ ಮನೆಗೆ ಹೋಗಿ ಏಕೆ ಪರಿಹಾರ ಕೊಡಲಿಲ್ಲ. ಈ ರೀತಿಯ ತಾರತಮ್ಯದ ಧೋರಣೆ ಅನಾಗರೀಕ ಸರ್ಕಾರದ ಲಕ್ಷಣ ಅಂತ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಬೊಮ್ಮಾಯಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ತಿರುಗಿ ಬಿದ್ದಿರೋ ಬಿಜೆಪಿ ʻಪಿಎಫ್‌ಐ ಸಂಘಟನೆಯ ಕಬಂಧ ಬಾಹು ವಿಸ್ತರಿಸಲು ನಿಮ್ಮದೇ ಪ್ರೋತ್ಸಾಹ ಕಾರಣ ಅಂತ ಆಕ್ರೋಶ ಹೊರಹಾಕಿದೆ.

-masthmagaa.com

Contact Us for Advertisement

Leave a Reply