ಕೇಂದ್ರದ ತೆರಿಗೆ ಹಂಚಿಕೆ ಖಂಡಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ!

masthmagaa.com:

ರಾಜ್ಯದ ಪಾಲಿನ ತೆರಿಗೆ, ವಿಶೇಷ ಅನುದಾನ ಹಂಚಿಕೆಯಲ್ಲಿ ಅನ್ಯಾಯವನ್ನ ಖಂಡಿಸಿ, ವಿಧಾನಸಭೆಯಲ್ಲಿ ನಿರ್ಣಯ ಒಂದನ್ನ ಮಂಡಿಸಲಾಗಿದೆ. ಇದ್ರಲ್ಲಿ ಬಾರತದ ಪ್ರಜಾಪ್ರಭುತ್ವದಲ್ಲಿ ಸ್ಥಿರವಾದ ಒಕ್ಕೂಟ ವ್ಯವಸ್ಥೆ ಇದೆ. ಪ್ರತಿಯೊಂದು ರಾಜ್ಯವೂ ರಾಷ್ಟ್ರೀಯ ಆರ್ಥಿಕತೆಯ ಭಾಗ. ಹಾಗಾಗಿ ರಾಜ್ಯಗಳ ಅಭಿವೃದ್ಧಿಯ ದಾರಿ, ಸಮಾನ ತೆರಿಗೆ ಹಂಚಿಕೆಯನ್ನ ಒಳಗೊಂಡಿರ್ಬೇಕುʼ ಅಂತ ಹೇಳಲಾಗಿದೆ. ಅಲ್ಲದೆ, ಕೇಂದ್ರ ಸರ್ಕಾರ ಎಲ್ಲಾ ಬೆಳೆಗಳಿಗೂ MSP ಫಿಕ್ಸ್‌ ಮಾಡ್ಬೇಕು ಅನ್ನೋ ನಿರ್ಣಯವನ್ನ ಪಾಸ್‌ ಮಾಡಲಾಗಿದೆ. ಇನ್ನು ಸೆಶ್ಶನ್‌ನಲ್ಲಿ ಭೂ ಕಂದಾಯ(ತಿದ್ದುಪಡಿ) ಬಿಲ್‌ ಪಾಸಾಗಿದೆ. ಇದ್ರ ಪ್ರಕಾರ ಕೃಷಿಯೇತರ ಉದ್ದೇಶಗಳಿಗೆ ಭೂಮಿ ಪರಿವರ್ತನೆ ಮಾಡ್ಕೊಳ್ಳೋಕೆ, ಯೋಜನೆಯ ಮಾಸ್ಟರ್‌ ಪ್ಲಾನ್‌ನಲ್ಲಿ ಇರೋ ಉದ್ದೇಶಗಳಿಗೆ ಬಳಸಿಕೊಳ್ಳೋಕೆ ಜಿಲ್ಲಾಧಿಕಾರಿ ಪರ್ಮಿಶನ್‌ ಬೇಕಿಲ್ಲ. ಇನ್ನು ಇದ್ರ ಜೊತೆ ಬಗರ್‌ ಹುಕುಂ ಸಮಿತಿಗೆ ಸಂಬಂಧಪಟ್ಟ ವಿದೇಯಕವೊಂದನ್ನ ಪಾಸ್‌ ಮಾಡಲಾಗಿದೆ. ಇದ್ರಲ್ಲಿ ಬಹರ್‌ ಹುಕುಂ ಸಮಿತಿಯಲ್ಲಿ ಇರೋಕೆ ಇಷ್ಟ ಇಲ್ಲದ ಶಾಸಕರ ಬದಲಾಗಿ, ಬೇರೊಬ್ಬ ಸದಸ್ಯರನ್ನ ನೇಮಕ ಮಾಡ್ಬೋದು. ಇನ್ನು ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಂಡ್‌ ವ್ಯವಸ್ಥೆ ಮಾಡಲಾಗಿದೆ ಅಂತ ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ಪರಿಷತ್‌ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ʻನಗರದಲ್ಲಿ 30 ಕಡೆ ಸೇಫ್ಟಿ ಐಲ್ಯಾಂಡ್‌ ವ್ಯವಸ್ಥೆ ಇದೆ. ಇದ್ರಲ್ಲಿರೋ ಅಲಾರಾಂ ಬಟನ್ ಒತ್ತಿದ್ರೆ ತಕ್ಷಣ ಪೊಲೀಸರು ಸ್ಥಳಕ್ಕೆ ಬರ್ತಾರೆ. ಜೊತೆಗೆ ಅಪರಾಧಿಗಳನ್ನು ಹಿಡಿಯಲು AI ಬಳಕೆ ಮಾಡ್ತಿದ್ದೇವೆ ಅಂದಿದ್ದಾರೆ. ಇನ್ನೊಂದೆಡೆ ಮುಂಬರೋ ಲೋಕಸಭೆ ಎಲೆಕ್ಷನ್‌ ಸೀಟು ಹಂಚಿಕೆಗಾಗಿ ರಾಜ್ಯದಲ್ಲಿ ಬಿರುಸಿನ ಚರ್ಚೆಗಳಾಗ್ತಿವೆ. ಬೆಂಗಳೂರು ಗ್ರಾಮೀಣ, ಮಂಡ್ಯ, ಕೋಲಾರ, ತುಮಕೂರು ಮತ್ತು ಹಾಸನ ಕ್ಷೇತ್ರಗಳನ್ನ ಜೆಡಿಎಸ್‌ಗೆ ನೀಡಲು ಬಿಜೆಪಿ ಮುಂದಾಗಿದೆ ಅಂತೇಳಲಾಗ್ತಿದೆ. ಮಾಜಿ ಸಿಎಂ HD ಕುಮಾರಸ್ವಾಮಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರನ್ನ ಮೀಟ್‌ ಮಾಡಿ ಮಾತುಕತೆ ನಡೆಸಿದ ವೇಳೆ ಈ ಬಗ್ಗೆ ಚರ್ಚೆಯಾಗಿದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply