ಕರ್ನಾಟಕ ಅಸೆಂಬ್ಲಿ ಎಲೆಕ್ಶನ್‌ಗೆ ಸಜ್ಜಾದ ಎಸ್‌ಡಿಪಿಐ! ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!

masthmagaa.com:

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ಮುಂಬರೋ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನ ಪ್ರಕಟ ಮಾಡಿದೆ. ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸೋದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝಿ ಘೋಷಿಸಿದ್ದು, ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸ್ರನ್ನ ಪ್ರಕಟ ಮಾಡಿದ್ದಾರೆ. ಹಾಗೂ ಎಸ್‌ಡಿಪಿಐ ಸ್ಪರ್ಧೆಯಿಂದ ಮತ ಡಿವೈಡ್‌ ಆಗಿ ಬಿಜೆಪಿಗೆ ಅನುಕೂಲವಾಗುತ್ತದೆ ಅನ್ನೋದ್ರ ಬಗ್ಗೆ ಉತ್ತರಿಸಿದ ಫೈಝಿ, ಕಾಂಗ್ರೆಸ್ ಸ್ಪರ್ಧೆಯಿಂದ, ಜೆಡಿಎಸ್ ಸ್ಪರ್ಧೆಯಿಂದ ಬಿಜೆಪಿಗೆ ಗೆಲುವಾಗುತ್ತದೆ ಅಂತ ಯಾಕೆ ಹೇಳೋದಿಲ್ಲ. ನಾವು ನಮ್ಮದೇ ಆದಂತಹ ರಾಜಕೀಯ ಮಾಡುತ್ತೇವೆ. ಬಿಜೆಪಿ ಬಿಟ್ಟು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಸ್‌ಡಿಪಿಐ ಪಕ್ಷ ಸಿದ್ಧ ಅಂತ ಫೈಝಿ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply