ʻಕಾಶಿ ತಮಿಳ್‌ ಸಂಗಮಂʼ: ಮೋದಿ ಭಾಷಣದಲ್ಲಿ AI ಮ್ಯಾಜಿಕ್‌!

masthmagaa.com:

ಡಿಸೆಂಬರ್‌ 17 ರಂದು ಸ್ಟಾರ್ಟ್‌ ಆಗಿರೋ ʻಕಾಶಿ ತಮಿಳ್‌ ಸಂಗಮಂʼ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ AI ಪ್ರಯೋಗವಾಗಿದೆ. ಮೋದಿ ಮಾಡಿದ ಭಾಷಣವನ್ನ AI ಬಳಸಿ ರಿಯಲ್‌ ಟೈಮ್ ಟ್ರಾನ್ಸ್‌ಲೇಟ್‌ ಮಾಡಲಾಗಿದೆ. ತಮಿಳುನಾಡಿನಿಂದ ಬಂದ ಆಡಿಯನ್ಸ್‌ಗೆ ಸಲೀಸಾಗಿ ಅರ್ಥವಾಗೋ ಹಾಗೆ ಮೋದಿಯವ್ರು ಹಿಂದಿಯಲ್ಲಿ ಮಾಡಿದ ಭಾಷಣವನ್ನ, ಅದೇ ಕ್ಷಣ ಕ್ವಿಕ್‌ ಆಗಿ ತಮಿಳು ಭಾಷೆಗೆ ರಿಯಲ್‌ ಟೈಮ್ ಟ್ರಾನ್ಸ್‌ಲೇಶನ್ ಮಾಡಲಾಗಿದೆ. ಈ ಕುರಿತು ಮಾತನಾಡಿರೋ ಪ್ರಧಾನಿ ಮೋದಿ, ಹೆಚ್ಚಿನ ಜನರನ್ನ ಈಸಿಯಾಗಿ ರೀಚ್‌ ಆಗೋಕೆ AI ತುಂಬಾ ಹೆಲ್ಪ್‌ ಮಾಡುತ್ತೆ ಅಂತ AI ಮೇಲಿನ ತಮ್ಮ ನಂಬಿಕೆಯನ್ನ ವ್ಯಕ್ತಪಡಿಸಿದ್ದಾರೆ. ಇನ್ನು ವಾರಣಾಸಿ ಮತ್ತು ದೆಹಲಿ ಮಧ್ಯೆ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಅಫಿಶಿಯಲ್‌ ಆಗಿ ಚಾಲನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply