ಕಾಶ್ಮೀರದಲ್ಲಿ ಹಿಮವಿಲ್ಲ: ಪ್ರೇಮ ಕಾಶ್ಮೀರ ಆಯ್ತು ಡ್ರೈ ಕಾಶ್ಮೀರ

masthmagaa.com:

ಕಾಶ್ಮೀರ ಕಣಿವೆಯಲ್ಲಿ ಈ ಬಾರಿ ಸ್ನೋ ಫಾಲ್‌ ಅಥ್ವಾ ಹಿಮಪಾತ… ಹಿಮವೃಷ್ಟಿ ಕಾಣದೆ, ಕಲರ್‌ಲೆಸ್‌ ಫೀಲ್‌ ಕೊಡ್ತಿದೆ. ಚಳಿಗಾಲದಲ್ಲಿ ಕಾಶ್ಮೀರ ಚೆನ್ನಾಗಿರ್ತೆ ಅಂತ ಟೂರ್‌ ಹೋದೋರಿಗೆಲ್ಲಾ, ಬಿಸಿಲಿನ ಬಿಸಿ ತಟ್ಟಿದೆ. ಅಲ್ಲದೆ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟ ಕೂಡ ಪೋಸ್ಟ್‌ಪೋನ್‌ ಆಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಅಲ್ಲದೆ ಮುಂಬರೋ ಬೇಸಿಗೆಯಲ್ಲಿ ಹಿಮನದಿಗಳು ಬತ್ತಿ, ಪರದಾಡೋ ಪತಿಸ್ಥಿತಿ ಬರ್ಬೋದು ಅಂತ ಅಲ್ಲಿನ ಹವಾಮಾನ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಕಳೆದೆರಡು ವರ್ಷಗಳ ಫೋಟೋಗಳನ್ನ ಶೇರ್‌ ಮಾಡಿ, ವರ್ಷದಿಂದ ವರ್ಷಕ್ಕೆ ಹಿಮ ಕಡಿಮೆ ಆಗ್ತಿರೋದ್ರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗುಲ್ಮಾರ್ಗ್‌ ಪ್ರದೇಶ ಇಷ್ಟು ಡ್ರೈ ಆಗಿರೋದನ್ನ ಈ ಹಿಂದೆ ನಾನು ನೋಡೆ ಇಲ್ಲ ಅಂತ ಪೋಸ್ಟ್‌ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply