ಪ್ರಧಾನಿ ಸುಳ್ಳು ಹೇಳಿದ್ದಾರೆ: BRS

masthmagaa.com:

ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ಪ್ರಧಾನಿ ಮೋದಿ, KCR ಅಂದ್ರೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ ರಾವ್‌ ವಿರುದ್ದ ಸ್ಪೋಟಕ ಹೇಳಿಕೆ ನೀಡಿದ್ದಾರೆ. 2020ರ ಹೈದರಾಬಾದ್‌ ಮುನ್ಸಿಪಾಲ್‌ ಕಾರ್ಪೊರೇಶನ್‌ ಚುನಾವಣೆ ಬಳಿಕ NDA ಮೈತ್ರಿಕೂಟಕ್ಕೆ ಸೇರೊಕೆ ಕೆಸಿಆರ್‌ ಬಯಸಿದ್ರು. ಆದ್ರೆ ನಾನು ತೆಲಂಗಾಣದ ಜನರಿಗೆ ಮೋಸ ಮಾಡಲ್ಲ ಅಂತೇಳಿ, ಅವರ ಮನವಿಯನ್ನ ತಿರಸ್ಕರಿಸಿದ್ದೆ ಅಂತ ಹೇಳಿದ್ದಾರೆ. ಹೈದರಾಬಾದ್‌ ಮುನ್ಸಿಪಾಲ್‌ ಕಾರ್ಪೊರೇಶನ್‌ ಚುನಾವಣೆಯಲ್ಲಿ ಬಿಜೆಪಿ 48 ಸೀಟುಗಳನ್ನ ಗೆದ್ದಿತ್ತು. ಆಗ KCRಗೆ ಬೆಂಬಲದ ಅವಶ್ಯಕತೆಯಿತ್ತು. ಅವ್ರು ದಿಲ್ಲಿಗೆ ಬಂದು ನನ್ನ ಮೀಟ್‌ ಮಾಡಿ, NDA ಸೇರೋದಾಗಿ ಹೇಳಿದ್ರು. ತಮ್ಮನ್ನ ಬೆಂಬಲಿಸುವಂತೆ ಕೇಳಿಕೊಂಡ್ರು. ಆದ್ರೆ ನಾನು KCR ಜೊತೆ ಸೇರೋಕೆ ಆಗ್ಲಿಲ್ಲ. ಅವರ ಮನವಿಯನ್ನ ನಾನೇ ತಿರಸ್ಕರಿಸಿದೆ ಅಂತ ಹೇಳಿದ್ದಾರೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ BRS ಪಕ್ಷದ ವಕ್ತಾರ ಮೋದಿ ಹೇಳಿಕೆಗಳನ್ನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ನೆಕ್ಸ್ಟ್‌ ಟೈಮ್‌ ಪ್ರಧಾನಿಯನ್ನ ಮೀಟ್‌ ಮಾಡೋಕೆ ಮುಖ್ಯಂತ್ರಿಗಳು ಹೋದಾಗ ಕ್ಯಾಮರಾ ತಗೊಂಡು ಹೋಗಬೇಕು. ಯಾಕಂದ್ರೆ ರಾಜಕೀಯ ಲಾಭಕ್ಕಾಗಿ ಪ್ರಧಾನಿ ಯಾವುದೇ ಕೀಳು ಮಟ್ಟಕ್ಕೆ ಬೇಕಾದ್ರೂ ಇಳಿತಾರೆ ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply