ಜೆಡಿಎಸ್‌ಗೆ ತೆಲಂಗಾಣದ BRS ಹಾಗೂ ಪಶ್ಚಿಮ ಬಂಗಾಳ TMC ಯಿಂದ ಬೆಂಬಲ!

masthmagaa.com:

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ಕೊಡೋದಾಗಿ ತೆಲಂಗಾಣ ಸಿಎಂ ಕೆಸಿಆರ್‌ ಅವರ BRS ಪಕ್ಷ ಹೇಳಿದೆ. ಜೆಡಿಎಸ್‌ ನಮ್ಮ ಮಿತ್ರ ಪಕ್ಷ. ಅದಕ್ಕೆ ನಮ್ಮ ಬೆಂಬಲವಿದೆ. ಚುನಾವಣೆಯಲ್ಲಿ ಜೆಡಿಎಸ್‌ ಗೆಲುವು ಸಾಧಿಸೋದನ್ನ ನಾವು ಬಯಸ್ತೀವಿ ಅಂತ BRSನ ಹಿರಿಯ ನಾಯರು ಹೇಳಿದ್ದಾರೆ. ಜೊತೆಗೆ ಜೆಡಿಎಸ್‌ ಪಕ್ಷಕ್ಕೆ ಸಪೋರ್ಟ್‌ ನೀಡೊ ನಿಟ್ಟಿನಲ್ಲಿ ಕೆಸಿಆರ್‌ ಖಂಡಿತವಾಗಿಯೂ ಕ್ಯಾಂಪೇನ್‌ ಮಾಡ್ತಾರೆ. ತೆಲುಗು ಮಾತಾಡುವ ಹೆಚ್ಚು ಜನರಿರೊ ಪ್ರದೇಶಗಳಲ್ಲಿ ಅವರು ಜೆಡಿಎಸ್‌ ಪರವಾಗಿ ಕ್ಯಾಂಪೇನ್ ಮಾಡ್ತಾರೆ ಅಂತ BRS ನಾಯಕರು ಹೇಳಿದ್ದಾರೆ. ಅಂದ್ಹಾಗೆ ತೆಲಂಗಾಣದ ಗಡಿಯಲ್ಲಿರೋ ಕೆಲ ಜಿಲ್ಲೆಗಳಲ್ಲಿ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಇಚ್ಛೆಯನ್ನ BRS ಹೊಂದಿದೆ. ಇದರ ಭಾಗವಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅದರ ಪ್ರಚಾರ ಮಾಡಿ, ಕಲ್ಯಾಣ ಕರ್ನಾಟಕದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಗೆಲ್ಲಿಸುವ ಮೂಲಕ BRS ರಾಷ್ಟ್ರೀಯ ಪಕ್ಷದ ಆರಂಭ ಮಾಡುವ ಯೋಚನೆಯಲ್ಲಿದೆ ಅಂತ ವಿಶ್ಲೇಷಿಸಲಾಗ್ತಿದೆ. ಇನ್ನು ಜೆಡಿಎಸ್‌ಗೆ ತೆಲಂಗಾಣದ BRS ಅಷ್ಟೇ ಅಲ್ದೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಕೂಡ ಸಾಥ್‌ ನೀಡಿದೆ. ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಅವರು ಕಳೆದ ವಾರ ಮಮತಾ ಬ್ಯಾನರ್ಜಿ ಅವರನ್ನ ಕೋಲ್ಕತ್ತಾದಲ್ಲಿ ಭೇಟಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವಂತೆ ಮನವಿ ಮಾಡಿದ್ರು. ಅವರ ಮನವಿಗೆ ದೀದಿ ಒಪ್ಪಿಗೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply