ಕೀರ್ತಿ ಸುರೇಶ್ ಗೆ ಕೋರೋನ ದೃಢ: ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ ನಟಿ!

masthmagaa.com:

ಕೊರೊನಾ ಮೂರನೇ ಅಲೆ ಸಧ್ಯಕ್ಕೆ ಜೋರಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಕೋರೋನ ಪ್ರಕರಣಗಳು ಲಕ್ಷದ ಲೆಕ್ಕದಲ್ಲಿ ಜಾಸ್ತಿ ಆಗ್ತಾ ಇದೆ. ಇತೀಚೆಗೆ ಮಹೇಶ್ ಬಾಬು, ರಾಜೇಂದ್ರ ಪ್ರಸಾದ್, ತ್ರಿಶಾ, ಮಂಚು ಲಕ್ಷ್ಮಿ, ವರಲಕ್ಷ್ಮಿ ಶರತ್ ಕುಮಾರ್, ಮೀನಾ, ಥಮನ್ ಸೇರಿದಂತೆ ಬಹುತೇಕ ಸಿನಿಮಾ ಕಲಾವಿದರು ಕೋರೋನಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈಗ ಈ ಸಾಲಿಗೆ ನಟಿ ಕೀರ್ತಿ ಸುರೇಶ್ ಕೂಡ ಸೇರ್ಪಡೆಯಾಗಿದ್ದಾರೆ.

ಕಳೆದ 2 ದಿನಗಳಿಂದ ಶೀತದಿಂದ ಬಳಲುತ್ತಿದ್ದ ನಟಿ ಕೀರ್ತಿಸುರೇಶ್ ಇತ್ತೀಚೆಗಷ್ಟೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪರೀಕ್ಷೆಗಳಲ್ಲಿ ಕೊರೊನಾ ಪಾಸಿಟಿವ್ ಬಂದಿದೆ, ತಕ್ಷಣ ವಿಷಯವನ್ನ ಸ್ವತಃ ಅವರೇ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

“ಸದ್ಯ ನಾನು ಮನೆಯಲ್ಲೇ ಐಸೊಲೇಶನ್‌ನಲ್ಲಿದ್ದೇನೆ. ವೈದ್ಯರ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ, ನನ್ನನ್ನು ಭೇಟಿಯಾದವರು ಕೋರೋನಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಹಾಗೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಮುನ್ನೆಚ್ಚರಿಕೆ ವಹಿಸಬೇಕು” ಎಂದು ಮನವಿ ಮಾಡಿ ಕೀರ್ತಿ ಸುರೇಶ್ ಟ್ವೀಟ್ ಮಾಡಿದ್ದಾರೆ.

-masthmagaa.com

 

Contact Us for Advertisement

Leave a Reply