KFC ವೆಜಿಟೇರಿಯನ್‌ ಆದ್ರೆ ಮಾತ್ರ ಅಯೋಧ್ಯೆ ಒಳಗೆ ಎಂಟ್ರಿ!

masthmagaa.com:

ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತ್ರ ಅದೆಷ್ಟೋ ದೊಡ್ಡ ದೊಡ್ಡ ಕಂಪನಿಗಳು ಮಂದಿರದ ಸುತ್ತಾಮುತ್ತಾ ಹೂಡಿಕೆ ಮಾಡೋಕೆ ಮುಂದಾಗಿವೆ. ಇದೀಗ ಫೇಮಸ್‌ KFC ಕೂಡ ಆಯೋಧ್ಯೆದಲ್ಲಿ ಅಂಗಡಿ ತೆರೆಯಲು ಸಜ್ಜಾಗಿದೆ. ಅಯೋಧ್ಯೆಯ ಅಧಿಕಾರಿಗಳು ಕೂಡ KFC ನಿರ್ಮಾಣಕ್ಕೆ ಅಸ್ತು ಅಂದಿದ್ದಾರೆ. ಆದ್ರೆ ಕೆಲ ಕಂಡೀಷನ್‌ ಹಾಕಿದ್ದಾರೆ. KFC ನಾನ್‌ ವೆಜ್‌ ಬದಲು, ಕೇವಲ ವೆಜ್‌ ಆಹಾರವನ್ನ ಮಾರಾಟ ಮಾಡಿದ್ರೆ ಮಾತ್ರ ಅಂತ ಹೇಳಿದ್ದಾರೆ. ಯಾಕಂದ್ರೆ ಅಯೋಧ್ಯೆಯ ರಾಮಮಂದಿರ ಸುತ್ತಮುತ್ತಲಿನ ಸುಮಾರು 15 ಕಿಮೀ ಪ್ರದೇಶದವರೆಗೆ ಯಾವ್ದೇ ರೀತಿ ಮಾಂಸದ ಮಾರಾಟ ಅಥ್ವಾ ಮದ್ಯ ಮಾರಾಟಕ್ಕೆ ನಿಷೇಧವಿದೆ. ಆದ್ರಿಂದ KFC ತೆರೆಯೋಕೆ ಯಾವ್ದೇ ರೀತಿಯ ಆಕ್ಷೇಪವಿಲ್ಲ. ಆದ್ರೆ ಮಾಂಸ ಮಾರಾಟ ಮಾಡೋ ಹಾಗಿಲ್ಲ ಅಂತ ಕಂಡೀಷನ್‌ ಹಾಕಲಾಗಿದೆ.

-masthmagaa.com

Contact Us for Advertisement

Leave a Reply