ಎಲ್ಲಾ ದಾಖಲೆ ಪುಡಿಗಟ್ಟಿದ KGF Chapter 2! ಎರಡು ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

masthmagaa.com:

ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೊದಲ ದಿನ ಹಿಂದಿ ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದ 53.95 ಕೋಟಿ ರೂಪಾಯಿಯೂ ಸೇರಿ ಇಡೀ ಭಾರತದಲ್ಲಿ 134.5 ಕೋಟಿ ಗಳಿಸಿತ್ತು. ಎರಡನೇ ದಿನಕ್ಕೆ ಹಿಂದಿ ಬೆಲ್ಟ್ ನಲ್ಲಿ 46.79 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಬರೀ ಹಿಂದಿ ವರ್ಷನ್​ನಿಂದ 100.74 ಕೋಟಿ ರೂಪಾಯಿ ಬಾಚಿಕೊಂಡಂತಾಗಿದೆ. ಈ ಮೂಲಕ ಇಲ್ಲಿ ತನಕ ಬಾಹುಬಲಿ 2 ಮತ್ತು ದಂಗಲ್ ಸಿನಿಮಾಗಳು ಮಾಡಿದ್ದ ದಾಖಲೆಯನ್ನ ಪುಡಿಗಟ್ಟಿದೆ. ಒಂದೇ ಭಾಷೆಯಲ್ಲಿ ಯಾವುದೇ ಭಾರತದ ಸಿನಿಮಾ ಕೇವಲ 2 ದಿನಗಳಲ್ಲಿ ಮಾಡದ ಗಳಿಕೆಯನ್ನ ಮಾಡಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಬಾಕ್ಸ್ ಆಫೀಸ್ ದೊಡ್ಡಪ್ಪ ಅಂತ ಪ್ರೂವ್ ಮಾಡಿದೆ.

ಇನ್ನು ಕೆಜಿಎಫ್ 2 ಎರಡನೇ ದಿನಕ್ಕೆ ಭಾರತದಲ್ಲಿ 240 ಕೋಟಿ ರೂಪಾಯಿ ಗಳಿಸಿದ್ದು, ಎರಡು ದಿನದ ವರ್ಲ್ಡ್​ ವೈಡ್​ ಕಲೆಕ್ಷನ್ 300 ಕೋಟಿ ದಾಟಿದೆ ಅಂತ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಇನ್ನು ಕೆಜಿಎಫ್-2 ಸಿನಿಮಾವನ್ನ ಕನ್ನಡದಲ್ಲೇ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಮನಸೋತಿದ್ದಾರೆ. ಸಿನಿಮಾ ನೋಡಿದ ಬಳಿಕ ನಿರ್ಮಾಪಕ ವಿಜಯ್ ಕಿರಗಂದೂರ್​ಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply