ಅಡ್ವಾನ್ಸ್​ ಬುಕ್ಕಿಂಗ್​ನಲ್ಲಿ KGF Chapter 2 ಹೊಸ ದಾಖಲೆ!

masthmagaa.com:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ನಾರ್ತ್ ಇಂಡಿಯಾ ಭಾಗದಲ್ಲಿ ಕಳೆದ ವಾರ ಓಪನ್ ಆಗಿದ್ದು ಈಗಾಗಲೇ ಸುಮಾರು 20 ಕೋಟಿಯಷ್ಟು ಗಳಿಕೆ ಬರೀ ಅಡ್ವಾನ್ಸ್ ಬುಕಿಂಗ್ ನಿಂದಲೇ ಹರಿದು ಬಂದಿದೆ. ಈ ಮೂಲಕ ಅಡ್ವಾನ್ಸ್ ಬುಕಿಂಗ್ ನಲ್ಲೇ ಕೆಜಿಎಫ್ ಸಿನಿಮಾ ಹೊಸ ದಾಖಲೆ ಬರೆದಿದೆ. ಹೊಸ ಬೆಂಚ್ ಮಾರ್ಕ್ ಸೆಟ್ ಮಾಡಿದೆ. ಇನ್ನು ಕರ್ನಾಟಕದಲ್ಲಿ ಅಡ್ವಾನ್ಸ್ ಬುಕಿಂಗ್ ನಿನ್ನೆಯಿಂದ ಆರಂಭವಾಗಿದ್ದು ಬೆಂಗಳೂರಿನಲ್ಲಿ ಮೊದಲ ದಿನದ ಟಿಕೆಟ್ ಗಳು ಬಹುತೇಕ ಖಾಲಿಯಾಗಿವೆ. ಜೊತೆಗೆ ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮೊದಲನೇ ದಿನದ ಶೋ ದಾಖಲೆ ಮಟ್ಟದಲ್ಲಿ ಬುಕ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನ DRC ಚಿತ್ರಮಂದಿರದಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಆದ ಕೇವಲ 6 ನಿಮಿಷಕ್ಕೆ 4000 ಟಿಕೆಟ್ ಗಳು ಮಾರಾಟವಾದ ಸುದ್ದಿ ಕೂಡ ಹೊರಬಿದ್ದಿದೆ. ಇನ್ನು PVR ಮತ್ತು INOX ಚಿತ್ರಮಂದಿರಗಳ ಬುಕಿಂಗ್ ಇನ್ನಶ್ಟೆ ಆರಂಭ ಆಗಬೇಕಾಗಿದೆ.
ಇನ್ನು ಏಪ್ರಿಲ್ 14 ರಂದೇ ಬಾಲಿವುಡ್ ನಟ ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಸಿನಿಮಾ ಕೂಡ ಬಿಡುಗಡೆ ಆಗಬೇಕಿತ್ತು. ಆದ್ರೆ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಶುರುವಾದ ದಿನದಿಂದ ಇಲ್ಲಿ ತನಕ ಸುಮಾರು 50 ಲಕ್ಷದಷ್ಟು ಮಾತ್ರ ಟಿಕೆಟ್ ಗಳು ಮಾರಾಟ ಆಗಿರುವ ಹಿನ್ನೆಲೆಯಲ್ಲಿ ಜೆರ್ಸಿ ಸಿನಿಮಾದ ಬಿಡುಗಡೆಯನ್ನ ಒಂದು ವಾರ ಮುಂದೂಡಲಾಗಿದೆ.

-masthmagaa.com

Contact Us for Advertisement

Leave a Reply