masthmagaa.com:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾದ 11 ದಿನಕ್ಕೆ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 883.56 ಕೋಟಿ ಗಳಿಸಿ ತನ್ನ ನಾಗಲೋಟ ಮುಂದುವರೆಸಿದೆ. ಈ ಮೂಲಕ ಭಾರತದ ಆರನೇ ಹೈಯೆಸ್ಟ್ ಗ್ರಾಸ್ಸಿಂಗ್ ಸಿನಿಮಾ ಆಗಿ ಹೊರಹೊಮ್ಮಿದೆ. ಈ ವಿಷಯವನ್ನ ಟ್ವೀಟ್ ಮಾಡಿರುವ ಸಿನಿಮಾ ವಿಶ್ಲೇಷಕ ಮನೋಬಾಲ ವಿಜಯ ಬಾಲನ್, ಕೆಲವೇ ದಿನಗಳಲ್ಲಿ ಚಿತ್ರ ಸಾವಿರ ಕೋಟಿ ಸೇರುತ್ತೆ ಅಂತ ಹೇಳಿದ್ದಾರೆ. ಬರೀ ಹಿಂದಿ ಬೆಲ್ಟ್​​ನಲ್ಲೇ 11 ದಿನಗಳಲ್ಲಿ 321 ಕೋಟಿ ಗಳಿಸಿರುವ KGF ಚಾಪ್ಟರ್ 2 – ಅಮೀರ್ ಖಾನ್ ರ PK, ರಜನಿಕಾಂತ್ ರ 2.0, ಸಲ್ಮಾನ್ ಖಾನ್ ರ ಸುಲ್ತಾನ್ ಸಿನಿಮಾಗಳ ಲೈಫ್ ಟೈಮ್ ಕಲೆಕ್ಷನ್ ದಾಖಲೆಯನ್ನ ಪುಡಿಗಟ್ಟಿದೆ.

-masthmagaa.com

Contact Us for Advertisement

Leave a Reply