4 ವರ್ಷದ ಕಾತರಕ್ಕೆ ಕೊನೆಗೂ ತೆರೆ.. ಬಂದೇ ಬಿಡ್ತು KGF Chapter 2

masthmagaa.com:

ಭಾರತ ಸೇರಿದಂತೆ ವಿಶ್ವದಾದ್ಯಂತ ನೆಲೆಸಿರುವ ಸಿನಿಪ್ರಿಯರು ಕಾತುರದಿಂದ ಕಾಯುತ್ತಿರುವ ಕನ್ನಡದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಾಕಿಂಗ್ ಸ್ಟಾರ್ ಯಶ್ ಅಭಿನಯ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಸಿನಿಮಾ ನಿರೀಕ್ಷೆಗೂ ಮೀರಿ ಇಡೀ ದೇಶದಾದ್ಯಂತ ಅಭೂತಪೂರ್ವ ಯಶಸ್ಸನ್ನ ದಾಖಲಿಸಿತ್ತು. ಸೀಮಿತ ಮಾರುಕಟ್ಟೆ ಎಂದೇ ಭಾವಿಸಲಾದ ಕನ್ನಡ ಚಿತ್ರರಂಗದ ಕಡೆಗೆ ಇಡೀ ದೇಶ ಮುಖಮಾಡುವ ಮಾಡಿತ್ತು. ಈಗ ಸಹಜವಾಗಿ ಚಿತ್ರದ ಎರಡನೇ ಭಾಗವನ್ನು ಕಣ್ಣು ತುಂಬಿಕೊಳ್ಳೋಕೆ ಇಡೀ ವಿಶ್ವದಾದ್ಯಂತ ಸಿನಿಪ್ರೇಮಿಗಳು ಕಾಯುತ್ತಿದ್ದಾರೆ.

ಇನ್ನು ಬೆಂಗಳೂರು ಒಂದರಲ್ಲೇ ‘ಕೆಜಿಎಫ್​ 2’ ಚಿತ್ರಕ್ಕೆ 500ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಮಲ್ಟಿಪ್ಲೆಕ್ಸ್​ಗಳಲ್ಲಿನ ಶೋ ಕೂಡ ಸೇರಿದರೆ ಬರೋಬ್ಬರಿ 1000ಕ್ಕೂ ಅಧಿಕ ಶೋ ಸಿಗುವ ಸಾಧ್ಯತೆ ಇದೆ. ಇನ್ನು ಕೆಜಿಎಫ್ ಚಿತ್ರಕ್ಕೆ ಕರ್ನಾಟಕ ಅಷ್ಟೇ ಅಲ್ಲದೆ ಉತ್ತರ ಭಾರತದಲ್ಲು ದೊಡ್ಡ ಹೈಪ್ ಸಿಕ್ಕಿದೆ. ಚಿತ್ರತಂಡ ಕೂಡ ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿದೆ. ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ಭಾಗದಲ್ಲಿ ಕೂಡ ಚಿತ್ರಕ್ಕೆ ದೊಡ್ಡಮಟ್ಟದ ಓಪನ್ ಸಿಗಲಿದೆ. ಜೊತೆಗೆ ದಾಖಲೆ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದೆ. ಸತತ ನಾಲ್ಕು ದಿನ ರಜೆ ಇರುವುದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚುವುದರ ಜೊತೆಗೆ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಹೊಸ ದಾಖಲೆ ಬರೆದರೂ ಅಚ್ಚರಿ ಏನಿಲ್ಲ ಎನ್ನುತ್ತಿದ್ದಾರೆ ಬಾಕ್ಸ್​ ಆಫೀಸ್ ಪಂಡಿತರು.

-masthmagaa.com

Contact Us for Advertisement

Leave a Reply