ಜಿ20 ಸಭೆಗೆ ಅಡ್ಡಿಪಡಿಸಿ ಅಂತ ಕಾಶ್ಮೀರಿ ಮುಸ್ಲಿಂರಿಗೆ ಕರೆಕೊಟ್ಟ ಖಲಿಸ್ತಾನಿ!

masthmagaa.com:

ದೆಹಲಿಯಲ್ಲಿ ನಡೆಯಲಿರುವ ಜಿ20 ಸಭೆಗೆ ಅಡ್ಡಿಪಡಿಸುವಂತೆ ಕಾಶ್ಮೀರಿ ಮುಸ್ಲಿಂರಿಗೆ ಖಲಿಸ್ತಾನಿ ಪ್ರತ್ಯೇಕವಾದಿ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ಕರೆ ನೀಡಿದ್ದಾನೆ. ಕಾಶ್ಮೀರಿ ಮುಸ್ಲಿಮರು ದೆಹಲಿಗೆ ಹೋಗಿ ಜಿ20 ಶೃಂಗಸಭೆಗೆ ಅಡ್ಡಿಪಡಿಸಿ ಅಂತ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾನೆ. ಶುಕ್ರವಾರದ ಪ್ರಾರ್ಥನೆಯ ನಂತರ ಶೃಂಗಸಭೆ ನಡೆಯುವ ಪ್ರಗತಿ ಮೈದಾನಕ್ಕೆ ಮೆರವಣಿಗೆ ಮಾಡಿ ಅಂತ ಹೇಳಿದ್ದಾನೆ. ಜೊತೆಗೆ ದೆಹಲಿಯ ಇಂದಿರಾಗಾಂಧಿ ಇಂಟರ್‌ನ್ಯಾಷನಲ್‌ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಧ್ವಜ ಕೂಡ ಹಾರಿಸ್ತೀನಿ ಅಂತ ಎಚ್ಚರಿಕೆ ಬೇರೆ ಕೊಟ್ಟಿದ್ದಾನಂತೆ.

0masthmagaa.com

Contact Us for Advertisement

Leave a Reply