ನಕ್ಷತ್ರಕ್ಕೆ ಕಿಚ್ಚನ ಹೆಸರು : ಇದೇ ನೋಡಿ ಬೆಸ್ಟ್‌ ಬರ್ತ್‌ಡೇ ಗಿಫ್ಟ್‌ !

masthmagaa.com:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೆಪ್ಟಂಬರ್ 2ರಂದು 50ನೇ ವರ್ಷಕ್ಕೆ ಕಾಲಿಡ್ತಾ ಇದ್ದಾರೆ. ಕಿಚ್ಚನ ಬರ್ತ್‌ಡೇ ಗೆ ಸ್ಪೆಷಲ್‌ ಆಗಿ ಕಾರ್ಯಕ್ರಮಗಳನ್ನು ಮಾಡೋಕೂ ಕೂಡ ಅವರ ಅಭಿಮಾನಿಗಳು ಪ್ಲಾನ್‌ ಮಾಡಿಕೊಂಡಿದ್ದಾರೆ. ಇದರ ಜೊತೆಯಲ್ಲೇ ಸುದೀಪ್‌ ಅವರಿಗೆ ಇನ್ನೊಂದು ಸ್ಪೆಷಲ್‌ ಗಿಫ್ಟ್‌ ಕೊಡೋಕೆ ಅರಸು ಕ್ರಿಯೇಷನ್ಸ್ ರೆಡಿಯಾಗಿದೆ.

ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಅಂತ ನಾಮಕರಣ ಮಾಡಿದ್ದಾರೆ. ಈ ಜಗತ್ತಿನಲ್ಲಿರುವ ರತ್ನಗಳಲ್ಲಿ ನೀನೇ ಅತ್ಯಮೂಲ್ಯ. ಇಂದು ನಕ್ಷತ್ರ ಹುಟ್ಟಿದ ದಿನವನ್ನು ನಾವು ಆಚರಿಸುತ್ತೇವೆ. ಆದರೆ ಆಕಾಶದಲ್ಲಿ ಅಲ್ಲ ಭೂಮಿಯಲ್ಲಿ ಅನ್ನೋ ಅರ್ಥಪೂರ್ಣ ಸಂದೇಶದ ಮೂಲಕ ಕಿಚ್ಚನಿಗೆ ಅರಸು ಕ್ರಿಯೇಷನ್ಸ್ ಹುಟ್ಟುಹಬ್ಬದ ಶುಭಾಶಯವನ್ನ ತಿಳಿಸಿದೆ.

ಇನ್ನು ಕಿಚ್ಚ ಸುದೀಪ್ ಬರ್ತ್ ಡೇ ದಿನ ಸುದೀಪ್‌ ಅವರ 46ನೇ ಸಿನಿಮಾದ ಟೈಟಲ್ ರಿವೀಲ್ ಆಗಲಿದೆ. ಮಧ್ಯರಾತ್ರಿ 12ಕ್ಕೆ ಟೈಟಲ್‌ ಘೋಷಣೆಯಾಗಲಿದೆ. ಈ ಮೊದಲು ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಮಾತ್ರ ಜನ್ಮದಿನ ಆಚರಿಸಿಕೊಳ್ತಾರೆ. ಮನೆ ಬಳಿ ಯಾವುದೇ ಸಂಭ್ರಮ ಇರೋದಿಲ್ಲ ಅಂತ ಹೇಳಿದ್ರು. ಆದ್ರೆ ಈಗ ಸುದೀಪ್ ಅವರ ಮನೆ ಜೆಪಿ ನಗರದಲ್ಲಿಯೂ ಕಿಚ್ಚೋತ್ಸವ ನಡೆಯಲಿದೆ.

ನಕ್ಷತ್ರಕ್ಕೆ ಹೇಗೆ ಹೆಸರಿಡೋಕೆ ಸಾಧ್ಯ ಅನ್ನೋ ಡೌಟ್‌ ಇದ್ರೆ ಈ ಕೆಳಗೆ ಕೊಟ್ಟಿರುವ ಲಿಂಕ್‌ ಕ್ಲಿಕ್‌ ಮಾಡೋ ಮೂಲಕ ನಿಮ್ಮ ಡೌಟ್‌ ಅನ್ನ ಕ್ಲೀಯರ್‌ ಮಾಡಿಕೊಳ್ಳಬಹುದು.
https://youtu.be/OBNqdKfMWbY?si=iXREZkzlTfLhNlYT

-masthmagaa.com

Contact Us for Advertisement

Leave a Reply