ಪುಟಿನ್‌ಗೆ ಪತ್ರ ಬರೆದ ಕಿಮ್ಮಣ್ಣ! ಹೇಳಿದ್ದೇನು?

masthmagaa.com:

ಇತ್ತೀಚಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ರಷ್ಯಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ರು. ಇದೀಗ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ 75ನೇ ವಾರ್ಷಿಕೋತ್ಸವದ ಅಂಗವಾಗಿ ಕಿಮ್ಮಣ್ಣ ತಮ್ಮ ಕುಚಿಕು ದೋಸ್ತ್‌ ಪುಟಿನ್‌ ಅವ್ರಿಗೆ ಪತ್ರೆ ಬರೆದಿದ್ದಾರೆ. ಇತ್ತೀಚಿನ ರಷ್ಯಾ ಭೇಟಿಯಲ್ಲಿ ನಡೆದ ಹಲವು ಪ್ರಮುಖ ವಿಚಾರಗಳ ಚರ್ಚೆಯಿಂದ ನನಗೆ ಸಂತೋಷವಾಗಿದೆ. ನಮ್ಮ ಸಂಬಂಧಗಳನ್ನ ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ಅದನ್ನ ಹೊಸ ಹಂತಕ್ಕೆ ತೆಗೆದುಕೊಂಡು ಹೋಗಲು ನಾವು ರೆಡಿ ಇದೀವಿ ಅಂತ ಕಿಮ್ಮಣ್ಣ ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ ಯುಕ್ರೇನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಉಂಟಾಗ್ತಿರೋ ಒತ್ತಡವನ್ನ ತಡೆದುಕೊಳ್ತಿರೋ ನಿಮಗೆ ಗುಡ್‌ ಲಕ್‌ ಅಂತ ಕಿಮ್‌ ವಿಶ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply