ಅಮೆರಿಕದ ವಾಯುನೆಲೆಗಳ ಫೋಟೋ ಸೆರೆ ಹಿಡಿದ ಕಿಮ್ಮಣ್ಣನ ಸ್ಯಾಟ್‌ಲೈಟ್‌!

masthmagaa.com:

ಅಮೆರಿಕ ಮೇಲೆ ಕಣ್ಬಿಡ್ಬೇಕು ಅಂತ ಇತ್ತೀಚೆಗೆ ತಾನೆ ಉತ್ತರ ಕೊರಿಯಾ ಸ್ಪೈ ಸ್ಯಾಟ್‌ಲೈಟ್‌ಗಳನ್ನ ಹಾರಿಸಿತ್ತು. ಈಗ ಈ ಬೇಹುಗಾರ ಉಪಗ್ರಹಗಳು ಕೆಲಸ ಮಾಡೋಕೆ ಶುರು ಮಾಡಿದ್ದು ಅಮೆರಿಕದ ಸೇನಾ ನೆಲೆಗಳ ಹಾಗೂ ದಕ್ಷಿಣ ಕೊರಿಯಾದಲ್ಲಿನ ಮೇಜರ್‌ ಟಾರ್ಗೆಟ್‌ಗಳ ಫೋಟೋ ತೆಗೆದಿದೆ ಅಂತ ಉತ್ತರ ಕೊರಿಯಾದ ಮಾಧ್ಯಮ ವರದಿ ಮಾಡಿದೆ. ಅಲ್ಲದೇ ಈ ಫೋಟೋಗಳನ್ನ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪರಿಶೀಲನೆ ಮಾಡಿದ್ದಾರೆ ಅಂತಾನೂ ವರದಿ ಮಾಡಿದೆ. ಅಂದ್ಹಾಗೆ ಇತ್ತೀಚೆಗೆ ತನ್ನ ಮೊದಲ ಸ್ಪೈ ಸ್ಯಾಟ್‌ಲೈಟ್‌ನ್ನ ಉತ್ತರ ಕೊರಿಯಾ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಇದೀಗ ಈ ಸ್ಯಾಟ್‌ಲೈಟ್‌ ಹವಾಯ್‌ಯ ಪರ್ಲ್‌ ಹಾರ್ಬರ್‌ ಬಳಿಯಿರೊ ಅಮೆರಿಕದ ನೌಕಾ ನೆಲೆಗಳ ಫೋಟೋಗಳನ್ನ ಸೆರೆಹಿಡಿದಿದೆ. ಜೊತೆಗೆ ದಕ್ಷಿಣ ಕೊರಿಯಾದ ಬಂದರು ನಗರವಾದ ಬುಸಾನ್‌ನ ಉಪಗ್ರಹ ಫೋಟೋಗಳನ್ನ ತೆಗೆದಿದೆ ಇದನ್ನ ಕಿಮ್‌ ನೋಡಿದ್ದಾರೆ ಅಂತ ಹೇಳಿದೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರೊ ದಕ್ಷಿಣ ಕೊರಿಯಾ, ಉತ್ತರ ಕೊರಿಯಾದ ಹೇಳಿಕೆಗಳನ್ನ ನಂಬೋಕೆ ಸಾಧ್ಯವಿಲ್ಲ. ಉಪಗ್ರಹ ಕೆಲಸ ಮಾಡ್ತಿದೆ ಅನ್ನೊದನ್ನ ತಿಳಿಯೋಕೆ ಇನ್ನ ಟೈಮ್‌ ಬೇಕು ಎಂದಿದೆ. ಅಂದ್ಹಾಗೆ ಸ್ಯಾಟ್‌ಲೈಟ್‌ ಲಾಂಚ್‌ ಬಳಿಕ ರಿಯಾಕ್ಟ್‌ ಮಾಡಿದ್ದ ಕಿಮಣ್ಣ, ʻನಾವು ಉಪಗ್ರಹ ಹಾರಿಸಿದ್ದು ನಮ್ಮ ಸೇಫ್ಟಿಗಾಗಿ ಅಷ್ಟೆʼ ಅಂತ ಹೇಳಿದ್ರು.‌ ಅದೇ ವೇಳೆ ಅಲ್ಲಿನ ಬಾಹ್ಯಾಕಾಶ ಸಂಸ್ಥೆ National Aerospace Technology Administration (NATA)ಗೆ ಭೇಟಿ ನೀಡಿ, ʻನಮ್ಮ ಸುತ್ತ ಇರೋ ಪ್ರತಿಕೂಲ ಶಕ್ತಿಗಳಿಂದ ನಮ್ಮನ್ನ ಡಿಫೆಂಡ್‌ ಮಾಡ್ಕೊಳ್ಳೋಕೆ ಈ ಸ್ಪೈ ಸ್ಯಾಟ್‌ಲೈಟ್‌ ಹಾರಿಸಲೇ ಬೇಕಿತ್ತು. ಇದರಿಂದ ಪ್ರಪಂಚದ ಬೆಸ್ಟ್‌ ಆರ್ಮಿಗೆ, ಪ್ರಪಂಚವನ್ನೇ ದಾಳಿ ಮಾಡೊ ಶಕ್ತಿ ಬಂದಿದೆʼ ಅಂತ ಹೇಳಿದ್ರು. ಇದರ ಬೆನ್ನಲ್ಲೇ ಇದೀಗ ದಕ್ಷಿಣ ಕೊರಿಯಾದಲ್ಲಿರೊ ಅಮೆರಿಕದ ಸೇನಾ ನೆಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದ್ರೆ ಇದುವರೆಗೆ ಈ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply