ಕ್ಷಿಪಣಿ ಹಾರಿಸಿ ಮತ್ತೆ ಸೇನಾ ಪವರ್‌ ಪ್ರದರ್ಶಿಸಿದ ನಾರ್ತ್‌ ಕೊರಿಯಾ!

masthmagaa.com:

ಬೆನ್ಬೆನ್ನಿಗೆ ಒಂದಲ್ಲಾ ಒಂದು ಕ್ಷಿಪಣಿ ಲಾಂಚ್‌ ಮಾಡ್ತಲೇ ಇರೋ ನಾರ್ತ್‌ ಕೊರಿಯಾ ಇದೀಗ ಮತ್ತೆ Hwasong-18 ಅನ್ನೋ ಇಂಟರ್‌ಕಾನ್ಟಿನೆಂಟಲ್‌ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನ ಲಾಂಚ್‌ ಮಾಡಿದೆ. ಈ ಕುರಿತು ನಾರ್ತ್‌ ಕೊರಿಯಾದ ನ್ಯೂಸ್‌ ಏಜೆನ್ಸಿ ಮಾಹಿತಿ ನೀಡಿದೆ. ಈ ಕ್ಷಿಪಣಿಯನ್ನ ನಾರ್ತ್‌ ಕೊರಿಯಾದ ಪ್ಯೊಂಗ್ಯಾಂಗ್‌ ಪ್ರದೇಶದಲ್ಲಿ ಉಡಾವಣೆ ಮಾಡಲಾಗಿದೆ. ಈ ಕ್ಷಿಪಣಿ 6,518 ಕಿಲೋಮೀಟರ್‌ ಎತ್ತರಕ್ಕೆ ಜಿಗಿದು ತನ್ನ ಟಾರ್ಗೆಟ್‌ನ್ನ ಯಶಸ್ವಿಯಾಗಿ ರೀಚ್‌ ಆಗಿದೆ ಎನ್ನಲಾಗಿದೆ. ಇನ್ನು ಈ ಕ್ಷಿಪಣಿ ಲಾಂಚ್‌ ಆಗೋದನ್ನ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ವೀಕ್ಷಿಸಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply