ಉತ್ತರ ಕೊರಿಯಾಗೆ ಎಲೆಕ್ಟ್ರಿಕ್‌ ವಸ್ತುಗಳ ಕಳ್ಳಸಾಗಣೆ ಮಾಡ್ತಿದ್ಯಾ ಚೀನಾ?

masthmagaa.com:

ಉತ್ತರ ಕೊರಿಯಾ ನಿನ್ನೆಯಷ್ಟೆ ಅಲ್ಲಿನ ಸರ್ವಾಧಿಕಾರಿ ಕಿಮ್‌ಜಾಂಗ್‌ ಉನ್‌ರ ನೇತೃತ್ವದಲ್ಲಿ ಇಂಟರ್‌ಕಾಂಟಿನೆಂಟಲ್‌ ಬ್ಯಾಲಿಸ್ಟಿಕ್‌ ಮಿಸೈಲ್‌ ಟೆಸ್ಟ್‌ ಮಾಡಿರೋದಾಗಿ ಹೇಳಿತ್ತು. ಇದೀಗ ಲಾಂಚ್‌ ವೇಳೆ ತೆಗೆದ ಕಿಮ್ಮಣ್ಣನ ಫೋಟೊ ಒಂದನ್ನ ಅಲ್ಲಿನ ಅಧಿಕೃತ ನ್ಯೂಸ್‌ ಪೇಪರ್‌ ಪಬ್ಲಿಷ್‌ ಮಾಡಿದೆ. ಈ ಫೋಟೊದಲ್ಲಿ ಕಿಮ್‌ ಪಕ್ಕದಲ್ಲಿ ಸಿಲ್ವರ್‌ ಬಣ್ಣದ ಫೊಲ್ಡೇಬಲ್‌ ಹ್ಯಾಂಡ್‌ಸೆಟ್‌ ಇರೋದು ಕಾಣಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕೊರಿಯಾ, ಎಲೆಕ್ಟ್ರಿಕ್‌ ವಸ್ತುಗಳನ್ನ ರಫ್ತು ಅಥ್ವಾ ಆಮದು ಮಾಡದಂತೆ ಉತ್ತರ ಕೊರಿಯಾ ಮೇಲೆ ವಿಶ್ವಸಂಸ್ಥೆ ಬ್ಯಾನ್‌ ಮಾಡಿದೆ. ಹಾಗಿದ್ರೂ ಕಿಮ್ಮಣ್ಣ ಅವುಗಳನ್ನ ಯೂಸ್‌ ಮಾಡ್ತಿದಾರೆ ಅಂದ್ರೆ ಚೀನಾದಿಂದ ಸಿಕ್ರೇಟ್‌ ಆಗಿ ಕಳ್ಳಸಾಗಾಣಿಕೆ ಆಗಿರುವ ಸಾಧ್ಯತೆ ಜಾಸ್ತಿಯಿದೆ ಅಂತ ಆರೋಪಿಸಿದೆ.

-masthmagaa.com

Contact Us for Advertisement

Leave a Reply