ಉತ್ತರ ಕೊರಿಯಾ ಮಿಸೈಲ್‌ ಪರೀಕ್ಷೆ ವೇಳೆ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಮಗಳು ಮತ್ತೊಮ್ಮೆ ಪ್ರತ್ಯಕ್ಷ!

masthmagaa.com:

ಜಗತ್ತಿನ ಮಕ್ಕಳೆಲ್ಲಾ ಶಾಲೆಯಲ್ಲಿ ದಿನ ಕಳೀತಾ ಇದ್ರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ರ ಮಗಳು ಮಾತ್ರ ತಂದೆಯ ಜೊತೆಯಲ್ಲಿ ಮಿಸೈಲ್‌ ಟೆಸ್ಟ್‌ ಮಾಡೋದನ್ನ ನೋಡ್ತಿದಾಳೆ. ಕಿಮ್ಮಣ್ಣನ ಉತ್ತರಾಧಿಕಾರಿ ಅಂತಲೇ ಬಿಂಬಿತವಾಗ್ತಿರೋ ಜು ಏ ಮೂರನೇ ಬಾರಿಗೆ ಈ ರೀತಿ ಮಿಸೈಲ್‌ ಪರೀಕ್ಷೆ ವೇಳೆ ತಂದೆಯ ಪಕ್ಕದಲ್ಲಿ ಇರೋದು ಕಂಡು ಬಂದಿದೆ. ಈ ಕಿಮ್ಮಣ್ಣನ ಮಗಳ ಫೋಟೊವನ್ನ ಅಲ್ಲಿನ ಸರ್ಕಾರಿ ಮಾಧ್ಯಮ ರಿಲೀಸ್‌ ಮಾಡಿದ್ದು, ಇದೊಂದು ಅಮೂಲ್ಯ ಮಗು ಮತ್ತು ಗೌರವಾನ್ವಿತರ ಮಗಳು ಅಂತ ಸಂಭೋಧಿಸಿದೆ. (ಹಾಗಾದ್ರೆ ಉತ್ತರಕೊರಿಯಾದಲ್ಲಿರೋ ಇನ್ನುಳಿದ ಮಕ್ಕಳೆಲ್ಲಾ ಏನು?..ಅದು ಮಾತ್ರ ಅಮೂಲ್ಯ ಮಗು ಅಂತೆ) ಅಂದ್ಹಾಗೆ ಆಕೆಯ ವಯಸ್ಸು, ಹೆಸರು ಹಾಗೂ ಇತರ ಯಾವುದೇ ಮಾಹಿತಿಯನ್ನ ಇಲ್ಲಿಯವರೆಗೂ ಬಹಿರಂಗಗೊಳಿಸಿಲ್ಲ. ಆದ್ರೆ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಕಿಮ್‌ನ ಮಗಳ ಹೆಸರು ಜು ಏ ಹಾಗೂ ಆಕೆಗೆ 10 ವರ್ಷ ವಯಸ್ಸಿರಬಹುದು ಅಂತ ಹೇಳಲಾಗ್ತಿದೆ. ಇನ್ನೊಂದ್‌ ಕಡೆ ದಕ್ಷಿಣ ಕೊರಿಯಾದ ಜಲಗಡಿ ತಲುಪಿದ್ದ ಉತ್ತರ ಕೊರಿಯಾದ ಹಡಗಿನ ಕಡೆಗೆ ವಾರ್ನಿಂಗ್‌ ಫೈರ್‌ ಮಾಡಿರೋದಾಗಿ ದಕ್ಷಿಣ ಕೊರಿಯಾ ಸೇನೆ ಹೇಳಿದೆ. ಇದ್ರಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ.

-masthmagaa.com

Contact Us for Advertisement

Leave a Reply