ಬ್ರಿಟನ್‌ ದೊರೆ ಕಿಂಗ್‌ ಚಾರ್ಲ್ಸ್‌-3ಗೆ ಕ್ಯಾನ್ಸರ್‌ ಕಾಯಿಲೆ!

masthmagaa.com:

ಕೆಲ ದಿನಗಳ ಹಿಂದಷ್ಟೇ ಬ್ರಿಟನ್‌ ದೊರೆ ಕಿಂಗ್‌ ಚಾರ್ಲ್ಸ್‌ lll ಪ್ರಾಸ್ಟೇಟ್‌ ಗ್ರಂಥಿಯ ಸಮಸ್ಯೆಯಿಂದ ಬಳಲ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು ಅಂತ ವರದಿಯಾಗಿತ್ತು. ಈ ಬೆನ್ನಲ್ಲೇ ಇದೀಗ 75 ವರ್ಷದ ಕಿಂಗ್‌ ಚಾರ್ಲ್ಸ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್‌ ಇದೆ ಅನ್ನೋ ಮಾಹಿತಿ ಹೊರಬಿದ್ದಿದೆ.‌ ಅಲ್ಲದೆ ಈಗಾಗ್ಲೆ ಕ್ಯಾನ್ಸರ್‌ಗೆ ಟ್ರೀಟ್‌ಮೆಂಟ್‌ ಶುರುಮಾಡಿದ್ದು, ತಮ್ಮೆಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನ ಮುಂದೂಡಿದ್ದಾರೆ. ಹೀಗಂತ ಖುದ್ದು ಬ್ರಿಟಿಷ್‌ ರಾಜವಂಶದ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಫೆಬ್ರುವರಿ 05 ರಂದು ಸ್ಟೇಟ್‌ಮೆಂಟ್‌ ನೀಡಿದೆ. ಕಿಂಗ್‌ ಚಾರ್ಲ್‌ ಒಳ್ಳೇ ಹೆಲ್ತಿ ಪರ್ಸನ್‌ ಆಗೇ ಇದ್ರು. ಈ ಹಿಂದೆ ಕೊರೋನ ಸೋಂಕಿಗೂ ತುತ್ತಾಗಿ ರಿಕವರ್‌ ಆಗಿದ್ರು. ಅದು ಬಿಟ್ರೆ ಅಂತಾ ಹೆಲ್ತ್‌ ಇಶ್ಯೂಸ್‌ ಏನೂ ಇರ್ಲಿಲ್ಲ. ಒಮ್ಮೆ ಪೋಲೋ ಆಡುವಾಗ ಕುದುರೆ ಮೇಲಿಂದ ಬಿದ್ದು ಗಾಯಗೊಂಡಿದ್ರು. ಇನ್ನೊಮ್ಮೆ ಭೀಕರ ಅವಲಾಂಚಿ ಅಥ್ವಾ ಹಿಮಪಾತದಲ್ಲಿ ಜಸ್ಟ್‌ ಮಿಸ್‌ ಆಗಿ ಬುದುಕುಳಿದಿದ್ರು. ಆ ವೇಳೆ ಅವ್ರ ಜೊತೆಗಿದ್ದ ಸ್ನೇಹಿತ ಒಬ್ರು ಪ್ರಾಣ ಕಳ್ಕೊಂಡಿದ್ರು. ಇನ್ನು ಒಂದು ವೇಳೆ ಕಿಂಗ್‌ ಚಾರ್ಲ್ಸ್‌ ತಮ್ಮ ಅಧಿಕಾರ ಬಿಡೋ ಪರಿಸ್ಥಿತಿ ಬಂದ್ರೆ, ಪ್ರಿನ್ಸ್‌ ವಿಲಿಯಮ್‌, ಅಥ್ವಾ ಪ್ರಿನ್ಸ್‌ ಆಫ್‌ ವೇಲ್ಸ್‌ ವಿಲಿಯಂ ಮುಂದಿನ ಕಿಂಗ್‌ ಆಗ್ತಾರೆ. ಪ್ರಿನ್ಸ್‌ ವಿಲಿಯಂ, ಕಿಂಗ್‌ ಚಾರ್ಲ್ಸ್‌ರ ಮೊದಲ ಪತ್ನಿ, ಪ್ರಿನ್ಸಸ್‌ ಆಫ್‌ ವೇಲ್ಸ್‌ ಡಯಾನಾರ ಪುತ್ರ. ಪ್ರಿನ್ಸ್‌ ಹ್ಯಾರಿ ಇವರ ಕಿರಿಯ ಮಗ. ಇನ್ನು ಬ್ರಿಟಿಷ್‌ ರಾಯಲ್‌ ಫ್ಯಾಮಿಲಿ ಸದಸ್ಯರಿಗೆ ಅನಾರೋಗ್ಯ ಕಾಣಿಸಿಕೊಳ್ಳೋದು, ಅನಾರೋಗ್ಯಕ್ಕೆ ಅವ್ರು ಬಲಿಯಾಗಿರೋ ಹಲವು ಇನ್ಸೆನ್ಸಸ್‌ ಇವೆ. ಸದ್ಯ ಧಾಖಲೆಯಲ್ಲಿರೋ ಮೊದಲ ಕಿಂಗ್‌, ಕೆನ್ನೆತ್‌ 1 858ನೇ, ಇಸವಿಯಲಿ ಟ್ಯೂಮರ್‌ನಿಂದಲೇ ಸತ್ತಿದ್ದು. ರಿಸೆಂಟಾಗಿ ಕ್ವೀನ್‌ ಎಲಿಜಬೆತ್‌ 2 ಬಹಳ ಏಜ್‌ ಆಗಿ ಸತ್ತಿದ್ರು. ಆಲ್ಮೋಸ್ಟ್‌ 96 ಆಗಿತ್ತು ಅವ್ರಿಗೆ. ಅವ್ರಿಗೆ ಮುಂಚೆ ಅಧಿಕಾರದಲ್ಲಿದ್ದ ಕಿಂಗ್‌ ಎಡ್‌ವರ್ಡ್‌ 6 ಗಂಟಲು ಕ್ಯಾನ್ಸರ್‌, ಕಿಂಗ್‌ ಜಾರ್ಜ್‌ 6 ಶ್ವಾಸಕೋಸದ ಕ್ಯಾನ್ಸರ್‌, ಎಡ್‌ವರ್ಡ್‌ 7 ಬ್ರಾಂಕೈಟಿಸ್‌, ಕ್ವೀನ್‌ ವಿಕ್ಟೋರಿಯಾಗೆ ವಯಸ್ಸಾಗಿತ್ತು. ಆದ್ರೂ ಹಾರ್ಟ್‌ ಫೇಲ್ಯೂರ್‌ ಆಗಿ ಸತ್ರು. ವಿಲಿಯಮ್‌ 4ಗೆ ನ್ಯುಮೋನಿಯಾ…. ಹಿಂಗೆ ಲಿಸ್ಟ್‌ ಹೋಗ್ತಾನೆ ಇರುತ್ತೆ. ಎಲ್ಲರೂ ಹೀಗೆ ಒಂದಲ್ಲಾ ಒಂದು ರೋಗಕ್ಕೇನೆ ಬಲಿಯಾಗಿರೋದು. ಜಗತ್ತನ್ನೇ ಆಳಿದ ಈ ಕುಟುಂಬದ ಸದಸ್ಯರನ್ನ ಮಹಾಮಾರಿಗಳು ಬಿಟ್ಟಿಲ್ಲ. ಇನ್ನು ರಾಯಲ್‌ ಡಿಸೀಸ್‌ ಬಗ್ಗೆ ನೀವು ಕೇಳೇ ಇರ್ತೀರ. ಹೀಮೋಫಿಲಿಯಾ, ಅಂದ್ರೆ ಗಾಯ ಆದ್ರೆ ರಕ್ತ ಹೆಪ್ಪುಗಟ್ಟದೇ ಇರೋ ಖಾಯಿಲೆ ಕ್ವೀನ್‌ ವಿಕ್ರೋರಿಯಾಗೆ ಇತ್ತು. ಆ ಖಾಯಿಲೆ ಅವರ ವಂಶಸ್ತರಿಗೂ ಕ್ಯಾರಿ ಆಗಿದೆ.

-masthmagaa.com

Contact Us for Advertisement

Leave a Reply