ಬ್ರಿಟನ್‌ ರಾಯಲ್‌ ಫ್ಯಾಮಿಲಿಯಲ್ಲಿ ಬಿರುಕು! ಕಿಂಗ್‌ ಚಾರ್ಲ್ಸ್‌ ಮಾಡಿದ್ದೇನು ಗೊತ್ತಾ?

masthmagaa.com:

ಬ್ರಿಟನ್‌ ರಾಯಲ್‌ ಫ್ಯಾಮಿಲಿ ಒಡೆದ ಕುಟುಂಬ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಇದಕ್ಕೆ ಇನ್ನಷ್ಟು ಪುಷ್ಟಿ ಕೊಡುವಂತೆ ಇನ್ನೊಂದು ಬೆಳವಣಿಗೆಯಾಗಿದ್ದು, ಇದೀಗ ಬ್ರಿಟನ್‌ನಲ್ಲಿ ಸದ್ದು ಮಾಡ್ತಾ ಇದೆ. ಬ್ರಿಟನ್‌ ರಾಜ ಕಿಂಗ್‌ ಚಾರ್ಲ್ಸ್‌ III, ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ಮಾರ್ಕೆಲ್‌ ದಂಪತಿಗಳ ಪರ್ಸನಲ್‌ ಸೆಕ್ಯುರಿಟಿಯನ್ನ ತೆಗೆದುಹಾಕಿದ್ದಾರೆ. ಅಂದ್ಹಾಗೆ 2020ರಲ್ಲಿ ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ಮಾರ್ಕೆಲ್‌ ರಾಯಲ್‌ ಫ್ಯಾಮಿಲಿಯನ್ನ ಹಾಗು ಅವರಿಗಿರೋ ರಾಜಪದವಿಗಳನ್ನ ತೊರೆದು ಹೋಗಿದ್ರು. ಜೊತೆಗೆ ಪ್ರಿನ್ಸ್‌ ಹ್ಯಾರಿ ತಮ್ಮ ಆಟೋ ಬಯಾಗ್ರಫಿಯನ್ನ ಬರೆದು ಅದ್ರಲ್ಲಿ ರಾಯಲ್‌ ಫ್ಯಾಮಿಲಿಗೆ ಸಂಬಂಧಿಸಿದ ಹಲವಾರು ಸೀಕ್ರೆಟ್‌ಗಳನ್ನ ಬಹಿರಂಗ ಮಾಡಿದ್ರು. ಆ ನಂತರ ಕಿಂಗ್‌ ಚಾರ್ಲ್ಸ್‌ III ಮತ್ತವ್ರ ಫ್ಯಾಮಿಲಿಗಿಂತ ಹ್ಯಾರಿ ದಂಪತಿಗಳೇ ಹೆಚ್ಚು ಪ್ರಾಮುಖ್ಯತೆ ಪಡೀತಾ ಇದ್ರು, ಹೆಚ್ಚು ಸುದ್ದಿಯಲ್ಲಿದ್ರು. ಹೀಗಾಗಿ ಇದಕ್ಕೆ ಪ್ರತೀಕಾರವಾಗಿ ಕಿಂಗ್‌ ಚಾರ್ಲ್ಸ್‌ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಸೆಕ್ಯುರಿಟಿ ತಗೆಯೋ ಮೂಲಕ ಕಿಂಗ್‌ ತಮಗಿನ್ನೂ ಪವರ್‌ ಇದೆ ಅಂತ ತೋರಿಸಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply