ಬ್ರಿಟನ್‌ನಲ್ಲಿ ರಾಜವೈಭವ! 74 ವರ್ಷದ ಯುವರಾಜನಿಗೆ ಪಟ್ಟಾಭಿಷೇಕ!

masthmagaa.com:

ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ರ ಪಟ್ಟಾಭಿಷೇಕ ಸಮಾರಂಭ ಇಂದು ಅದ್ದೂರಿಯಿಂದ ನಡೆಯುತ್ತಿದೆ. 1953 ರ ಬಳಿಕ ಅಂದ್ರೆ 70 ವರ್ಷಗಳ ಬಳಿಕ ಪಟ್ಟಾಭಿಷೇಕ ಸಮಾರಂಭ ನಡೆಯುತ್ತಿದ್ದು, ಇದಕ್ಕೆ ಸಾಕ್ಷಿಯಾಗಲು ಸಾವಿರಾರು ಗಣ್ಯರ ದಂಡು ಅಲ್ಲಿನ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ಗೆ ಆಗಮಿಸಿದೆ. ಲಂಡನ್‌ನ ಕೇಂದ್ರ ಭಾಗದಲ್ಲಿರುವ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ನಿಂದ ವೆಸ್ಟ್‌ಮಿನಿಸ್ಟರ್‌ ಅಬೆವರೆಗೆ ಸುಮಾರು 2 ಕಿಲೋ ಮೀಟರ್‌ ವೈಭವದ ಮೆರವಣಿಗೆಯೊಂದಿಗೆ ಬೆಳಿಗ್ಗೆ ಕಾರ್ಯಕ್ರಮ ಆರಂಭವಾಗಿದೆ. 6 ಕುದುರೆಗಳ ಸಾರೋಟಿನಲ್ಲಿ ಚಾರ್ಲ್ಸ್‌ ಹಾಗೂ ಪತ್ನಿ ಕ್ಯಾಮಿಲ್ಲಾ ಅವ್ರನ್ನ ಪಟ್ಟಾಭಿಷೇಕ ಸ್ಥಳಕ್ಕೆ ಕರೆದೊಯ್ಯಲಾಗುತ್ತೆ. ಅಲ್ಲಿ ಇಂಗ್ಲೆಂಡ್‌ನ ಕ್ಯಾಂಟರ್‌ಬರಿ ಚರ್ಚ್‌ನ ಆರ್ಚ್‌ಬಿಷಪ್‌ ಜಸ್ಟಿನ್‌ ವೆಲ್ಬಿ ನೇತೃತ್ವದಲ್ಲಿ 3ನೇ ಚಾರ್ಲ್ಸ್‌ ಅವ್ರಿಗೆ ಕಿರೀಟ ಧಾರಣೆ ಮಾಡಲಾಗುತ್ತೆ. ಜೊತೆಗೆ ಆರ್ಚ್‌ಬಿಷಪ್‌ ರಾಜರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಇದೇ ವೇಳೆ ಪ್ರತ್ಯೇಕ ಸರಳ ಸಮಾರಂಭದಲ್ಲಿ ಕ್ಯಾಮಿಲ್ಲಾ ಕೂಡ ರಾಣಿಯಾಗಿ ಕಿರೀಟ ಧರಿಸಲಿದ್ದಾರೆ. ಪಟ್ಟಾಭಿಷೇಕದ ಬಳಿಕ ರಾಜ ದಂಪತಿ ಬೃಹತ್‌ ಮೆರವಣಿಗೆಯೊಂದಿಗೆ ಬಕಿಂಗ್‌ಹ್ಯಾಮ್‌ ಅರಮನೆಗೆ ಹಿಂತಿರುಗಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಭಾರತದಿಂದ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಭಾಗಿಯಾಗಿದ್ದಾರೆ. ಅಲ್ದೇ ಆಸ್ಟ್ರೇಲಿಯಾದ ಪ್ರಧಾನಿ, ಚೀನಾದ ಉಪಾಧ್ಯಕ್ಷ, ಯುರೋಪಿಯನ್‌ ಯುನಿಯನ್‌ನ ಅಧ್ಯಕ್ಷೆ, ಫ್ರಾನ್ಸ್‌ ಅಧ್ಯಕ್ಷ , ನ್ಯೂಜಿಲೆಂಡ್‌ನ ಪ್ರಧಾನಿ, ಪಾಕ್‌ ಪ್ರಧಾನಿ, ಪಿಲಿಫೀನ್ಸ್‌, ಸ್ಪೇನ್‌, ಜಪಾನ್‌, ಡೆನ್ಮಾರ್ಕ್‌, ಜೋರ್ಡಾನ್‌, ಥೈಲೆಂಡ್‌ನ ರಾಜ ಹಾಗೂ ರಾಣಿಯರೂ ಸಮಾರಂಭಕ್ಕೆ ಆಗಮಿಸಿದ್ದಾರೆ. ಇನ್ನು ಭಾರತದಿಂದ ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಕೂಡ ಭಾಗಿಯಾಗಲಿದ್ದು, ಪಟ್ಟಾಭಿಷೇಕದ ಕನ್ಸರ್ಟ್‌ನಲ್ಲಿ ವಿಶೇಷ ಭಾಷಣವನ್ನ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ದೇ ಮುಂಬೈನ ಲಂಚ್‌ಬಾಕ್ಸ್‌ ಡೆಲಿವರಿಯ ಡಬ್ಬಾವಾಲಾದ ಇಬ್ಬರನ್ನ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇನ್ನು ರಾಜರಾದ ಬಳಿಕ ಚಾರ್ಲ್ಸ್ ಹಲವಾರು ರೂಲ್‌ಗಳನ್ನ ಫಾಲೋ ಮಾಡಬೇಕಿದೆ. ಅದ್ರಲ್ಲಿ ಅವರು ತಮ್ಮ ಆಟೋಗ್ರಾಫ್‌ನ್ನ ನೀಡುವಂತಿಲ್ಲ ಹಾಗೂ ಸೆಲ್ಫಿಗಳಿಗೆ ಪೋಸ್‌ ಕೋಡೊ ಹಾಗಿಲ್ಲ. ಆಟೋಗ್ರಾಫ್‌ನ್ನ ಫೋರ್ಜರಿ ಮಾಡೋ ಸಾಧ್ಯೆತಯಿರುತ್ತೆ ಅಂತ ಈ ನಿಯಮ ಮಾಡಲಾಗಿದೆ. ಅಲ್ದೇ ರಾಜ ತಮಗೆ ನೀಡುವ ಎಲ್ಲ ಗಿಫ್ಟ್‌ಗಳನ್ನ ಸ್ವೀಕರಿಸಬೇಕು. ಹಾಗೂ ರಾಜಕೀಯವಾಗಿ ತಟಸ್ಥರಾಗಿರಬೇಕು. ಅಂದ್ರೆ ಅವರು ಇಂಗ್ಲೆಂಡ್‌ನಲ್ಲಿ ನಡೆಯುವ ಚುನಾವಣೆಗಳಲ್ಲಿ ವೋಟ್‌ ಮಾಡುವಂತಿಲ್ಲ. ಇನ್ನು ಅಪರಿಚಿತರಿಂದ ಯಾವುದೇ ರೀತಿಯ ಫುಡ್‌ನ್ನ ಸ್ವೀಕರಿಸೋ ಹಾಗಿಲ್ಲ. ವಿದೇಶಗಳಿಗೆ ಪ್ರಯಾಣ ಮಾಡುವಾಗ ಡ್ರೆಸ್‌ ಕೋಡ್‌ನ್ನ ಫಾಲೋ ಮಾಡಬೇಕಾಗುತ್ತೆ. ಹಾಗೂ ಪ್ರಯಾಣಿಸುವ ವೇಳೆ ಒಂದು ಜೊತೆ ಬ್ಲ್ಯಾಕ್‌ ಡ್ರೆಸ್‌ನ್ನ ಕ್ಯಾರಿ ಮಾಡಬೇಕು. ಇನ್ನು ತಮ್ಮ ಹಿರಿಯ ಪುತ್ರ ಪ್ರಿನ್ಸ್‌ ವಿಲಿಯಂ ಜೊತೆ ಟ್ರಾವೆಲ್‌ ಮಾಡುವಂತಿಲ್ಲ. ನಿಯಮದ ಪ್ರಕಾರ ರಾಜ ಹಾಗೂ ಅವರ ಉತ್ತರಾಧಿಕಾರಿ ಜೊತೆಯಾಗಿ ಪ್ರಯಾಣಿಸುವಂತಿಲ್ಲ.

-masthmagaa.com

Contact Us for Advertisement

Leave a Reply