ವಿರಾಟ್‌ ವಿಶ್ವದಾಖಲೆ! ಕ್ರಿಕೆಟ್‌ಗೆ ಮತ್ತೊಬ್ಬ ‘ದೇವರು’!

masthmagaa.com:

ಕೋಲ್ಕತ್ತಾದ ಈಡನ್‌ ಗಾರ್ಡನ್‌ ಸ್ಟೇಡಿಯಂನಲ್ಲಿ ಬರ್ತಡೇ ಬಾಯ್‌, ಕಿಂಗ್‌ ಕೊಹ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಶತಕ ಬಾರಿಸಿ, ಕ್ರಿಕೆಟ್‌ ದೇವರು ಸಚಿನ್‌ ತಂಡಲ್ಕೂರ್‌ ಅವರ ಸಾಧನೆಯನ್ನ ಸರಿಗಟ್ಟಿದ್ದಾರೆ. ಕ್ಯಾಪ್ಟನ್‌ ರೋಹಿತ್‌ ಶರ್ಮಾ ಅವ್ರ ವಿಕೆಟ್‌ ಪತನದ ಬಳಿಕ, ಕ್ರೀಸ್‌ಗೆ ಬಂದ ಕೊಹ್ಲಿ 120 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ 101 ರನ್‌ ಗಳಿಸಿದ್ದಾರೆ. ಈ ಮೂಲಕ ತಮ್ಮ 35ನೇ ಜನ್ಮದಿನದಂದು ಏಕದಿನ ಕ್ರಿಕೆಟ್‌ ಮಾದರಿಯಲ್ಲಿ 49 ಶತಕಗಳನ್ನ ಪೂರೈಸಿದ್ದಾರೆ. ಅಲ್ದೇ ಸಚಿನ್‌ ಹೆಸರಿನಲ್ಲಿದ್ದ ಅತೀ ಹೆಚ್ಚು ಶತಕದ ದಾಖಲೆ ಸರಿಗಟ್ಟಿದ್ದಾರೆ. ಅಂದ್ಹಾಗೆ ಸಚಿನ್‌ ಒಟ್ಟು 452 ಪಂದ್ಯಗಳಲ್ಲಿ 49 ಶತಕ ಬಾರಿಸಿದ್ರು. ಆದ್ರೆ ಕೊಹ್ಲಿ, 288 ಪಂದ್ಯಗಳಲ್ಲಿ ಈ ಸಾಧನೆ ಮಾಡಿ, ತಮ್ಮ ಒಟ್ಟಾರೆ ಅಂತಾರಾಷ್ಟ್ರೀಯ ಶತಕಗಳ ಸಂಖ್ಯೆಯನ್ನ 79ಕ್ಕೆ ಏರಿಸಿದ್ದಾರೆ. ಇದಷ್ಟೇ ಅಲ್ದೇ ಜನ್ಮದಿನದ ದಿನ ಒನ್‌ಡೇಯಲ್ಲಿ ಶತಕ ಬಾರಿಸಿದ 7ನೇ, ಅದ್ರಲ್ಲೂ ವಿ‍ಶ್ವಕಪ್‌ನಲ್ಲಿ ಈ ವಿಶಿಷ್ಟ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ವಿರಾಟ್‌ ದಾಖಲೆಗೆ ರಿಯಾಕ್ಟ್‌ ಮಾಡಿರೋ ಸಚಿನ್‌, Well Played Virat… ನನಗೆ 49ರಿಂದ 50ಕ್ಕೆ ಹೋಗೋಕೆ ಈ ವರ್ಷ 365 ದಿನ ಬೇಕಾಯ್ತು. ನೀನು ಇನ್ನು ಕೆಲವೇ ದಿನದಲ್ಲಿ 49ರಿಂದ 50ಕ್ಕೆ ಹೋಗಿ ನನ್ನ ರೆಕಾರ್ಡ್‌ನ್ನ ಬ್ರೇಕಾ ಮಾಡ್ತಿಯಾ ಅಂತ ಅಂದ್ಕೊಂಡಿದ್ದೀನಿ ಅಂತ ಟ್ವೀಟ್‌ ಮಾಡಿದ್ದಾರೆ. ಇನ್ನು ಭಾರತದ ಸ್ಕೋರ್‌ ವಿಷಯಕ್ಕೆ ಬಂದ್ರೆ, 50 ಓವರ್‌ಗಳಲ್ಲಿ 325 ರನ್‌ ಕಲೆ ಹಾಕಿದೆ. 326 ರನ್‌ಗಳ ಗುರಿಯನ್ನ ಚೇಸ್‌ ಮಾಡ್ತಿರೊ ದಕ್ಷಿಣ ಆಫ್ರಿಕಾದ ಸ್ಕೋರ್‌ ಫುಲ್‌ ನ್ಯೂಸ್‌ ರೆಕಾರ್ಡ್‌ ಆಗೋ ವೇಳೆ ಈ ರೀತಿ ಇತ್ತು.

-masthmagaa.com

Contact Us for Advertisement

Leave a Reply