ಮೇ 19ರಂದು ಹೊರಬೀಳಲಿದೆ ಕೃಷ್ಣ ಜನ್ಮ ಭೂಮಿ ತೀರ್ಪು!

masthmagaa.com:

ದೇಶದಲ್ಲಿ ಧರ್ಮದ ಸಂಘರ್ಷ ಕೊನೆಯಾಗುವ ಲಕ್ಷಣ ಕಾಣಿಸುತ್ತಲೇ ಇಲ್ಲ.. ಅಯೋಧ್ಯೆ ರಾಮಜನ್ಮಭೂಮಿ ವಿವಾದ ಮುಗಿದು ಅಲ್ಲಿ ಮಂದಿರ ನಿರ್ಮಾಣವಾಗ್ತಿರೋ ಬೆನ್ನಲ್ಲೇ ಕೃಷ್ಣ ಜನ್ಮಭೂಮಿ ವಿವಾದ ಶುರುವಾಗಿದೆ. ಉತ್ತರ ಪ್ರದೇಶದ ಮಥುರಾದ ಕೋರ್ಟ್​​ ಕೃಷ್ಣ ಜನ್ಮಭೂಮಿ ವಿವಾದ ಸಂಬಂಧ ಮೇ 19ಕ್ಕೆ ತೀರ್ಪು ನೀಡಲಿದೆ. ಲಾಯರ್ ರಂಜನ ಅಗ್ನಿಹೋತ್ರಿ ಮತ್ತು ಇತರರು ಸೇರಿ ಸಲ್ಲಿಸಿರೋ ಅರ್ಜಿಯ ತೀರ್ಪು ಇದಾಗಿದೆ. ಈ ಅರ್ಜಿಯಲ್ಲಿ ಕೃಷ್ಣ ಜನ್ಮಭೂಮಿ ಇರೋ 13.37 ಎಕರೆಯಷ್ಟು ಭೂಮಿಯನ್ನು ಕೃಷ್ಣನಿಗೆ ನೀಡಬೇಕು ಮತ್ತು ಅಲ್ಲಿರೋ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ಕೋರ್ಟ್​ ಉಸ್ತುವಾರಿಯಲ್ಲೇ ಈ ಉತ್ಖನನ ಕಾರ್ಯಾಚರಣೆ ನಡೆಯಬೇಕು. ಅದ್ರ ತನಿಖಾ ವರದಿ ಕೂಡ ಸಲ್ಲಿಕೆಯಾಗಬೇಕು ಅಂತ ಮನವಿ ಮಾಡಲಾಗಿದೆ. ಈ ಹಿಂದೆ ಮಹಾರಾಜ ಕಂಸನ ಜೈಲಿನಲ್ಲಿ ಕೃಷ್ಣ ಜನ್ಮ ಪಡೆದಿದ್ರು. ಅದೇ ಜಾಗದಲ್ಲಿ ಮಸೀದಿ ನಿರ್ಮಾಣವಾಗಿದೆ. ಮಸೀದಿ ತೆರವುಗೊಳಿಸಿದ್ರೆ ಆ ಸತ್ಯ ಬಯಲಾಗಲಿದೆ ಅನ್ನೋದು ಅರ್ಜಿದಾರರ ವಾದವಾಗಿದೆ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಕೋರ್ಟ್​​ಗಳಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ಮೇ 19ರಂದು ತೀರ್ಪು ಹೊರಬೀಳ್ತಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply