AI ನಿಂದ 40% ಉದ್ಯೋಗಗಳ ಮೇಲೆ ಕೆಟ್ಟ ಪರಿಣಾಮ: IMF ಮುಖ್ಯಸ್ಥೆ

masthmagaa.com:

AI ನಿಂದ ಜಾಗತಿಕವಾಗಿ 40% ಉದ್ಯೋಗಗಳ ಮೇಲೆ ನೆಗಟಿವ್‌ ಪರಿಣಾಮಗಳು ಬೀರಲಿವೆ ಅಂತ IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ (Kristalina Georgieva) ಹೇಳಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ AI ಜಾಬ್‌ ಎಫೆಕ್ಟ್‌ ಜಾಸ್ತಿ ಇರಲಿದೆ. ಆದ್ರೆ ಭಾರತದಂತ ಅಭಿವೃದ್ಧಿ ಆಗ್ತಿರೋ ದೇಶಗಳಲ್ಲಿ ಇದ್ರ ಎಫೆಕ್ಟ್‌ ಕಡಿಮೆ ಇರುತ್ತೆ. ಅಲ್ಲದೆ AIನಿಂದಾಗಿ ಮುಂದುವರಿದ ದೇಶಗಳಲ್ಲಿ ಒಳ್ಳೊಳ್ಳೆ ಉದ್ಯೋಗಾವಕಾಶಗಳು ಸಿಗುತ್ವೆ. ನಿಮ್ಮ ಬಳಿ ಹೆಚ್ಚಿನ ಸ್ಕಿಲ್‌ ಇರೋ ಜಾಬ್‌ ಇದ್ದಷ್ಟೂ, ಹೆಚ್ಚಿನ ಇಂಪ್ಯಾಕ್ಟ್‌ ಮಾಡ್ಬೋದು ಅಂತ ಕ್ರಿಸ್ಟಲಿನಾ ಹೇಳಿದ್ದಾರೆ. ಅಲ್ಲದೆ ಒಟ್ಟಾರೆಯಾಗಿ AI ನಿಂದ ಜಾಗತಿಕ ಉದ್ಯೋಗಗಳ ಮೇಲೆ ನೆಗಟಿವ್‌ ಹಾಗೂ ಪಾಸಿಟಿವ್‌ ಪರಿಣಾಮಗಳೆರಡೂ ಇವೆ ಅಂತ ವಿಶ್ಲೇಷಿಸಿದ್ದಾರೆ.

-masthmagaa.com

Contact Us for Advertisement

Leave a Reply