ರಾಜ್ಯ ಸಾರಿಗೆಯಲ್ಲಿ ‘ಪ್ಯಾನಿಕ್ ಬಟನ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ’ ಅಳವಡಿಸಲು ಮುಂದಾದ ಸರ್ಕಾರ!

masthmagaa.com:

KSRTC ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲ ಬಸ್‌ಗಳಲ್ಲಿ ‘ಪ್ಯಾನಿಕ್ ಬಟನ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ’ಯನ್ನ ಅಳವಡಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಬಸ್‌ಗಳಲ್ಲಿ ಅಹಿತಕರ ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಆ ಮಾಹಿತಿ ಕೂಡಲೇ ನಿಗಮದ ನಿಯಂತ್ರಣ ಕೊಠಡಿಗೆ ತಲುಪುತ್ತದೆ. ಆ ಸಿಬ್ಬಂದಿ ಲೊಕೇಷನ್ ಆಧಾರದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸುತ್ತಾರೆ ಅಂತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ʻನಿರ್ಭಯ’ ಯೋಜನೆ ಅಡಿ ಈಗಾಗಲೇ BMTC ಅನುಮೋದನೆ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply