ಲಿಜ್‌ ಟ್ರುಸ್‌ ಆಶ್ವಾಸನೆಗಳಿಂದ ಕನ್ಸರ್ವೇಟಿವ್‌ ಪಕ್ಷಕ್ಕೆ ಹಿನ್ನಡೆ, ಚಿಂತೆಗೀಡಾದ ಬ್ರಿಟನ್‌ ಆಡಳಿತ ಪಕ್ಷ

masthmagaa.com:

ಬ್ರಿಟನ್‌ನಲ್ಲಿ ಬೋರಿಸ್‌ ಜಾನ್ಸನ್‌ ಉತ್ತರಾಧಿಕಾರಿ ಸ್ಥಾನಕ್ಕೆ ಸಖತ್‌ ಫೈಟ್‌ ನಡೀತಾ ಇದ್ದು, ಚುನಾವಣೆಯ ಕಾವು ಜೋರಾಗಿದೆ. ಪ್ರಧಾನಿ ಆಕಾಂಕ್ಷಿಗಳಾದ ರಿಷಿ ಸುನಾಕ್‌ ಮತ್ತು ಲಿಜಿ ಟ್ರಸ್‌ ಆಶ್ವಾಸನೆಗಳ ಮೇಲೆ ಆಶ್ವಾಸನೆ ಕೊಟ್ಟು ತಮ್ಮ ಕಾರ್ಯಕರ್ತರ ಮನ ಒಲಿಸೋಕೆ ಟ್ರೈ ಮಾಡ್ತಿದ್ದಾರೆ. ಅದ್ರಲ್ಲಿ ಲಿಜಿ ಟ್ರಸ್‌ ಅಂತೂ ಒಂದು ಹೆಜ್ಜೆ ಮುಂದೆ ಹೋಗ್ಬಿಟ್ಟು ಟ್ಯಾಕ್ಸ್‌ ಕಡಿಮೆ ಮಾಡ್ತೀನಿ ಅದು ಇದು ಅಂತ ಅನೌನ್ಸ್‌ ಮಾಡ್ತಿದ್ದಾರೆ. ಆದ್ರೆ ಈಗ ಇವ್ರ ಘೋಷಣೆಗಳು ಪ್ರ್ಯಾಕ್ಟಿಕಲ್ಲಿ ಅನುಷ್ಠಾನ ಮಾಡೋಕೆ ಸಾಧ್ಯ ಇಲ್ಲ, ಇವ್ರು ಮುಂದೆ ಪ್ರಧಾನಿ ಆದ್ರೆ ಅವ್ರ ಆರ್ಥಿಕ ನೀತಿಗಳಿಂದ ನಾವು ಮುಖ್ಯ ಚುನಾವಣೆಯಲ್ಲಿ ಮುಖಭಂಗ ಅನುಭವಿಸಬೇಕಾಗುತ್ತೆ ಅಂತ ಕನ್ಸರ್ವೇಟಿವ್‌ ಪಕ್ಷದ ನಾಯಕರು ಕಳವಳ ವ್ಯಕ್ತಪಡಿಸ್ತಿದ್ದಾರೆ. ಟೋರಿ ಲೀಡರ್‌ ಮೈಖೇಲ್‌ ಗೋವ್‌, ಲಿಜ್‌ ಟ್ರುಸ್‌ರ ಟ್ಯಾಕ್ಸ್‌ ಕಡಿತದ ಘೋಷಣಗೆಳು ರಿಯಾಲಿಟಿಯಿಂದ ಹಾಲಿಡೇಗೆ ಹೋದಂತೆ ಅಂದ್ರೆ ವಾಸ್ತವ ಬಿಟ್ಟು ದೂರನಡೆದಂತೆ ಅಂತ ಹೇಳಿದ್ದಾರೆ. ಇನ್ನು ಅತ್ತ ಒಪಿನಿಯನ್‌ ಪೋಲ್‌ನಲ್ಲಿ ಲೇಬರ್‌ ಪಾರ್ಟಿ ಕನ್ಸರ್ವೇಟಿವ್‌ಗಿಂತ 8 ಪಾಯಿಂಟ್‌ ಮುಂದೆ ಹೋಗಿದೆ ಎನ್ನಲಾಗಿದೆ. ಜೊತೆಗೆ ಅಪೊಸಿಷನ್‌ ಲೀಡರ್‌ ಕಿರ್‌ ಸ್ಟಾರ್ಮರ್‌ ಮತ್ತು ಲಿಜ್‌ ಟ್ರುಸ್‌ ನಡುವೆ ಸ್ಟಾರ್ಮರ್ರೇ ಒಪಿನಿಯನ್‌ ಪೋಲ್‌ನಲ್ಲಿ ಮುಂದೆ ಇದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply