ಲಕ್ಷದ್ವೀಪಕ್ಕೆ ಹೊಸ ಚೈತನ್ಯ! ಟೂರಿಸಂ ಹೆಚ್ಚಿಸಲು ಕೇಂದ್ರ ಪ್ಲಾನ್‌!

masthmagaa.com:

ಲಕ್ಷದ್ವೀಪದ ಮೇಕ್‌ಓವರ್‌ಗೆ ಸುಮಾರು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳ ಅಪ್‌ಗ್ರೇಡ್‌ಗೆ ಕೇಂದ್ರ ಸರ್ಕಾರ ಪ್ಲಾನ್‌ ಹಾಕಿದೆ. ಈ ಮೂಲಕ ಲಕ್ಷದ್ವೀಪವನ್ನ ಪ್ರಮುಖ ಪ್ರವಾಸಿ ತಾಣವಾಗಿ ಟ್ರಾನ್ಸ್‌ಫಾರ್ಮ್‌ ಮಾಡೋ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ ಅಂತ ಸರ್ಕಾರಿ ಅಧಿಕಾರಿಯೊಬ್ರು ಮಾಹಿತಿ ನೀಡಿದ್ದಾರೆ. ಇವ್ರ ಪ್ರಕಾರ, ಅಲ್ಲಿ ಬಂದರು ಸೌಲಭ್ಯಗಳು, ರಸ್ತೆ, ಕಡಲ ತೀರದ ಸೌಕರ್ಯಗಳನ್ನ ನೀಡಲಾಗುತ್ತೆ. ಜೊತೆಗೆ ಇನ್ನೂ ಕೆಲ ಪ್ರಮುಖ ಯೋಜನೆಗಳು ಒಳಗೊಂಡಿವೆ. ಅಂದ್ಹಾಗೆ ಇತ್ತೀಚೆಗೆ ನಿರ್ಮಲಾ ಸೀತರಾಮನ್‌ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿ ಬಗ್ಗೆ ಹೈಲೈಟ್‌ ಮಾಡಿದ್ರು. ಸಾಗರ್‌ಮಾಲಾ ಸ್ಕೀಮ್‌ ಅಡಿಯಲ್ಲಿ ಈ ಲಕ್ಷದ್ವೀಪದ ಯೋಜನೆಗಳಿಗೆ ಫಂಡಿಂಗ್‌ ಮಾಡಲಾಗುತ್ತೆ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply