ಏಕರೂಪ ನಾಗರಿಕ ಸಂಹಿತೆಯಲ್ಲಿ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ

masthmagaa.com:

ಏಕರೂಪ ನಾಗರಿಕ ಸಂಹಿತೆ (UCC) ವ್ಯಾಪ್ತಿಯಿಂದ ಸಲಿಂಗ ವಿವಾಹವನ್ನು ಹೊರಗಿಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಕಾನೂನು ಆಯೋಗ ಶಿಫಾರಸು ಮಾಡಿದೆ ಅಂತ ತಿಳಿದು ಬಂದಿದೆ. ಈ ಬಗ್ಗೆ ಆಯೋಗ ಸಲ್ಲಿಸಿರುವ ವರದಿಯಲ್ಲಿ, ʻವಿವಾಹ ಅನ್ನೋದು ಗಂಡು ಹಾಗೂ ಹೆಣ್ಣಿನ ನಡುವೆ ಮಾತ್ರ ನಡೆಯುವಂತಹ ಪ್ರಕ್ರಿಯೆ. ಹೀಗಾಗಿ ಪ್ರಕೃತಿಗೆ ವಿರುದ್ಧವಾದ ಸಲಿಂಗ ವಿವಾಹವನ್ನು ಸಮಾನ ನಾಗರಿಕ ಸಂಹಿತೆ ಅಡಿಯಲ್ಲಿ ತರಲು ಸಾಧ್ಯವಿಲ್ಲ ಅಂತ ಸೂಚಿಸಿದೆ. ಜೊತೆಗೆ ದೇಶದ ಎಲ್ಲಾ ಪ್ರಜೆಗಳಿಗೂ ಜಾತಿ, ಧರ್ಮ, ಪಂಥ ಮೀರಿ ಪ್ರತಿಯೊಬ್ಬರಿಗೂ ಅನ್ವಯವಾಗುವ ಒಂದೇ ರೀತಿಯ ನಾಗರಿಕ ಕಾನೂನು ಜಾರಿಗೆ ತರಲು ಆಯೋಗ ಶಿಫಾರಸು ಮಾಡಿದೆ. ಇನ್ನು ಮದುವೆಗೆ ಸಂಬಂಧಿಸಿದ ಆಯಾ ಧರ್ಮಗಳ ಪದ್ಧತಿ ಹಾಗೂ ಆಚರಣೆಗಳನ್ನು ನಿಯಂತ್ರಿಸಲ್ಲ. ವಿಚ್ಛೇದನ, ಉತ್ತರಾಧಿಕಾರ, ದತ್ತು ತೆಗೆದುಕೊಳ್ಳುವುದು ಸೇರಿದಂತೆ ಎಲ್ಲಾ ವಿಚಾರಗಳಿಗೂ ಸಮಾನ ನಾಗರಿಕ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿದೆ.

-masthmagaa.com

Contact Us for Advertisement

Leave a Reply