ರಾಹುಲ್‌ನನ್ನ ನೋಡಿ ಮೋದಿ ಕಲಿಯಬೇಕಿದೆ: ಪ್ರಿಯಾಂಕಾ ಗಾಂಧಿ

masthmagaa.com:

ಮೋದಿಯ ಮೇಲೆ ನಿರಂತರವಾಗಿ ಟಾರ್ಗೆಟ್‌ ಮಾಡ್ತಿರೋ ಪ್ರಿಯಾಂಕ್‌ ಗಾಂಧಿ ವಾದ್ರಾ ಜನರ ಕಷ್ಟಗಳನ್ನ ಆಲಿಸುವ ಪ್ರಧಾನಿಗಳನ್ನ ನಾವು ನೋಡಿದ್ದೇವೆ. ಆದ್ರೆ ಇದೇ ಮೊದಲ ಬಾರಿಗೆ ನನನ್ನ ಬೈಯುತ್ತಿದ್ದಾರೆ ಅಂತ ಜನರೆದುರು ತಮ್ಮ ಕಷ್ಟಗಳನ್ನ ಹೇಳಿಕೊಂಡ ಪ್ರಧಾನಿಯನ್ನ ನೋಡುತ್ತಿದ್ದೇವೆ ಅಂತ ಲೇವಡಿ ಮಾಡಿದ್ದಾರೆ. ಜೊತೆಗೆ ನನ್ನ ಸಹೋದರ ರಾಹುಲ್‌ ಗಾಂಧಿಯನ್ನ ನೋಡಿ ಮೋದಿ ಕಲಿಯಬೇಕಿದೆ. ಯಾಕಂದ್ರೆ ದೇಶದ ಜನರಿಗಾಗಿ ನನ್ನ ಸಹೋದರ ಗುಂಡು ಹಾಗೂ ಬೈಗುಳ ತಿನ್ನಲು ಸಿದ್ಧನಿದ್ದಾನೆ. ಆದ್ರೆ ಮೋದಿ ಕೇವಲ ಬೈಗುಳಕ್ಕೆ ಹೆದರುತ್ತಿದ್ದಾರೆ. ಮೋದಿ ಅವರೇ ಹೆದರಬೇಡಿ. ಸಾರ್ವಜನಿಕ ಜೀವನದಲ್ಲಿ ಇವೆಲ್ಲ ಸಾಮಾನ್ಯ ಅಂತ ಪ್ರಿಯಾಂಕಾ ವ್ಯಂಗ್ಯವಾಡಿದ್ದಾರೆ. ಅಂದ್ಹಾಗ ಇತ್ತೀಚೆಗೆ ಮೋದಿ, ಕಾಂಗ್ರೆಸ್‌ನವ್ರು ನನಗೆ 91 ಬಾರಿ ನಿಂದಿಸಿದ್ದಾರೆ ಅಂತ ಹೇಳಿದ್ರು. ಅದರ ಹಿನ್ನೆಲೆ ಮಾತಾಡಿರೊ ಪ್ರಿಯಾಂಕಾ ಜನರ ಸಮಸ್ಯೆ ಬಗ್ಗೆ ಮೋದಿ ಅವರ ಕಚೇರಿಯಲ್ಲಿ ಪಟ್ಟಿ ಕೂಡ ಮಾಡಲ್ಲ. ಬದಲಾಗಿ ಅವ್ರನ್ನ ಎಷ್ಟು ಸಲ ಬೈದಿದ್ದಾರೆ ಅಂತ ಲಿಸ್ಟ್ ಮಾಡ್ತಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply