ದೆಹಲಿ ಕೋರ್ಟ್‌ನಲ್ಲಿ ʻಬಟರ್‌ ಚಿಕನ್‌ ಮತ್ತು ದಾಲ್‌ ಮಖನಿʼ ಯುದ್ಧ!

masthmagaa.com:

ಕೋರ್ಟ್‌ನಲ್ಲಿ ವಿಚಾರಣೆಗೆ ಬರೋ ಎಲ್ಲಾ ಕೇಸ್‌ಗಳು ಸೀರಿಯಸ್‌ ಆಗಿರುತ್ತೆ ಅಂತ ಹೇಳೋಕಾಗಲ್ಲ. ಕೆಲವೊಮ್ಮೆ ಸಿಲ್ಲಿಯಾಗಿದ್ದು, ಹೊಟ್ಟೆತುಂಬಾ ನಗು ತರೋ ವಿಚಾರಗಳೂ ಕೋರ್ಟ್‌ ಮಟ್ಟಿಲೇರ್ತವೆ. ಇದೀಗ ಬಹಳ ಟೇಸ್ಟಿಯಾಗಿರೋ ವಿಚಾರವೊಂದು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ. ಬಟರ್‌ ಚಿಕನ್‌ ಮತ್ತು ದಾಲ್‌ ಮಖನಿಯನ್ನ ಮೊದಲಿಗೆ ಯಾರ್‌ ಕಂಡುಹಿಡಿದ್ರು ಅನ್ನೋ ಬಗ್ಗೆ ಕೋರ್ಟ್‌ ಒಳಗೆ ದೊಡ್ಡ ಸಂಘರ್ಷವೇ ನಡೆದಿದೆ. ದೆಹಲಿಯ ʻದರ್ಯಾಗಂಜ್‌ʼ ಅನ್ನೋ ರೆಸ್ಟೋರೆಂಟ್‌ ಒಂದು ತನ್ನ ಟೈಟಲ್‌ ಜೊತೆ ʻಇನ್ವೆಂಟರ್‌ ಆಫ್‌ ಬಟರ್‌ ಚಿಕನ್‌ & ದಾಲ್‌ ಮಖನಿʼ ಅಂತ ಟ್ಯಾಗ್‌ಲೈನ್‌ ಹಾಕೊಂಡಿದೆ. ಅಂದ್ರೆ ಈ ಎರಡು ಡಿಶ್‌ ನಾವೇ ಕಂಡುಹಿಡಿದಿರೋದು ಅಂತ ಹೇಳೋ ಹಾಗೇ ಹಾಕೊಂಡಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ದೆಹಲಿಯ ಮತ್ತೊಂದು ಫೇಮಸ್‌ ರೆಸ್ಟೋರೆಂಟ್‌ ʻಮೋತಿ ಮಹಲ್‌ʼ, ಎಷ್ಟ್‌ ಧೈರ್ಯ ಇದ್ರೆ ನಮ್ಮ ಇನ್ವೆಂಶನ್‌ನ್ನ ನಿಮ್ಮದು ಅಂತ ಹೇಳ್ಕೊಳ್ತೀರಾ? ಈ ಎರಡೂ ಡಿಶ್‌ ಕಂಡುಹಿಡಿದಿರೋದು ನಮ್ಮ ರೆಸ್ಟೋರೆಂಟ್‌ನ ಸಂಸ್ಥಾಪಕ, ಶೆಫ್‌ ಕುಂದನ್‌ ಲಾಲ್‌ ಗುಜ್ರಾಲ್‌ ಅಂತೇಳಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ಭಾರೀ ಚರ್ಚೆ ಆಗಿದೆ. ಈ ವೇಳೆ ದರ್ಯಾಗಂಜ್‌ ರೆಸ್ಟೋರೆಂಟ್‌ ಇವೆಲ್ಲಾ ಬೇಸ್‌ಲೆಸ್‌ ಅಂತ ಆರೋಪವನ್ನ ತಳ್ಳಿಹಾಕಿದೆ. ಸದ್ಯ ಈ ವಿಚಾರವಾಗಿ ಅಂತಿಮ ತೀರ್ಮಾನವಾಗ್ದೇ ಚರ್ಚೆ ಕಂಟಿನ್ಯೂ ಆಗಿದೆ.

-masthmagaa.com

Contact Us for Advertisement

Leave a Reply