ಸಮರ್ಪಕ ಆಯುಧ ನೀಡಿದ್ರೆ ಯುಕ್ರೇನ್‌ ಗೆಲ್ಲುತ್ತೆ: ಅಮೆರಿಕ

masthmagaa.com:

ಇನ್ನು ರಷ್ಯಾ ವಿರುದ್ಧ ಯುಕ್ರೇನ್‌ ಸಮರ್ಥವಾಗಿ ಹೋರಾಡ್ಬೇಕಂದ್ರೆ ಮಿತ್ರರಾಷ್ಟ್ರಗಳು ಮಿಲಿಟರಿ ಪ್ರೊಡಕ್ಷನ್‌ ಅಂದ್ರೆ ಈ ಟ್ಯಾಂಕ್‌ಗಳು, ಯುದ್ಧವಿಮಾನಗಳ ಉತ್ಪಾದನೆಯನ್ನ ಹೆಚ್ಚಿಸ್ಬೇಕು ಅಂತ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್ಸ್‌ ಹೇಳಿದ್ದಾರೆ. ಲಂಡನ್‌ನಲ್ಲಿ ಮಾತಾಡಿರೋ ಅವ್ರು, ಯುಕ್ರೇನ್‌ನ ಭವಿಷ್ಯ ಈಗ ಮಧ್ಯದಲ್ಲಿ ನಿಂತಿದೆ ಇಂತ ಸಮಯದಲ್ಲಿ ನಾವು ಸುಮ್ಮನೆ ಕೂರಲು ಆಗೋದಿಲ್ಲ. ಒಂದ್ವೇಳೆ ಪುಟಿನ್‌ ಗೆದ್ರೆ ಜಗತ್ತಿನಾದ್ಯಂತ ಅದು ಕೆಟ್ಟ ಪರಿಣಾಮ ಬೀರುತ್ತೆ, ಹಾಗಾಗಿ ನಾವು ದೊಡ್ಡ ಮಟ್ಟದ ಆಯುಧಗಳನ್ನ ಯುಕ್ರೇನ್‌ಗೆ ರವಾನೆ ಮಾಡ್ಬೇಕು ಅಂತ ಹೇಳಿದ್ದಾರೆ. ಇನ್ನು ಅಮೆರಿಕದ ಡಿಫೆನ್ಸ್‌ ಸೆಕ್ರಟರಿ ಕೂಡ ಇದೇ ರೀತಿ ಮಾತಾಡಿದ್ದು, ಸಮರ್ಪಕ ಆಯುಧಗಳನ್ನ ಪೂರೈಕೆ ಮಾಡಿದ್ರೆ ಯುಕ್ರೇನ್‌ ರಷ್ಯಾ ವಿರುದ್ಧ ಯುದ್ಧ ಗೆಲ್ಲುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply