ಅಮೆರಿಕದ ರಕ್ಷಣಾ ಕಾರ್ಯದರ್ಶಿಗೆ ಅನಾರೋಗ್ಯ: ICU ಗೆ ಶಿಪ್ಟ್‌!

masthmagaa.com:

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಅನಾರೋಗ್ಯದ ಬಗ್ಗೆ ಈಗ ಅಲ್ಲಿನ ಮಿಲಟರಿ ಹಾಸ್ಪಿಟಲ್‌ ಮಾಹಿತಿ ನೀಡಿದೆ. ಆಸ್ಟಿನ್‌ ಮೂತ್ರನಾಳದ ಸಮಸ್ಯೆಯಿಂದ ವಾಲ್ಟರ್‌ ರೀಡ್‌ ಮಿಲಟರಿ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಪ್ರಾಸ್ಪೆಟ್‌ ಕ್ಯಾನ್ಸರ್‌ ಟ್ರೀಟ್‌ಮೆಂಟ್‌ಗಾಗಿ ಆಸ್ಟಿನ್‌ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಬಳಿಕ ಕಳೆದ ವಾರ ಮೂತ್ರ ಕೋಶದ ಸಮಸ್ಯೆ ಹೆಚ್ಚಾಗಿ ಹೊಟ್ಟೆ, ಕಾಲು, ಸೊಂಟ ನೋವಿನಿಂದ ಬಳಲ್ತಿದ್ದ ಅವ್ರನ್ನ ಜನವರಿ 2 ರಂದು ICUಗೆ ಶಿಪ್ಟ್‌ ಮಾಡಲಾಗಿದೆ ಅಂತ ಅಲ್ಲಿನ ವೈದ್ಯರು ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಆಸ್ಟಿನ್‌ ಆಸ್ಪತ್ರೆ ಸೇರಿದ್ರ ಬಗ್ಗೆ ಸ್ವತಃ ಬೈಡನ್‌ಗೂ ಮಾಹಿತಿ ನೀಡಿರ್ಲಿಲ್ಲ. ತುಂಬಾ ಸೀಕ್ರಸಿ ಮೆಂಟೇನ್‌ ಮಾಡ್ತಿದ್ದಾರೆ ಅಂತ ಪೆಂಟಗಾನ್‌ ತೀರ ಟೀಕೆಗೆ ಒಳಗಾಗಿತ್ತು. ಅದ್ರ ಬೆನ್ನಲ್ಲೇ ಈ ಅಪ್‌ಡೇಟ್‌ ಬಂದಿದೆ.

-masthmagaa.com

Contact Us for Advertisement

Leave a Reply