ರಾಜ್ಯದಲ್ಲಿ ಕೊನೇ ಹಂತದ ಮತದಾನ! ಚಿಕ್ಕೋಡಿಯಲ್ಲಿ ಗರಿಷ್ಠ ಮತದಾನ!

masthmagaa.com:

ರಾಜ್ಯದಲ್ಲಿ ಎರಡನೇ ಮತ್ತು ಕೊನೇ ಹಂತದ ಮತದಾನ ಮುಗಿದಿದ್ದು ಲೋಕಸಭೆ ರಣಕಣಕ್ಕೆ ತೆರೆ ಬಿದ್ದಿದೆ. ಈ ಬಾರಿ ಉತ್ತರ ಕರಾವಳಿ, ಮತ್ತು ಮಧ್ಯ ಕರ್ನಾಟಕದ ಸುಮಾರು 14 ಕ್ಷೇತ್ರಗಳಿಗೆ ಮತದಾನ ಆಗಿದೆ. ಸುಮಾರು 227 ಅಭ್ಯರ್ಥಿಗಳು ಅದೃಷ್ಟಪರೀಕ್ಷೆಗೆ ಇಳಿದಿದ್ದು ಸಂಜೆ 6 ಗಂಟೆಗೆಯವರಿಗೂ ಮತದಾನ ಆಗಿದೆ. ಇನ್ನು ಸಂಜೆ 5 ಗಂಟೆವರೆಗೆ, ಒಟ್ಟಾರೆ ಮತದಾನದ ಪ್ರಮಾಣ ಕರ್ನಾಟಕದಲ್ಲಿ 66.05% ರಷ್ಟಿತ್ತು. ಈ ಪೈಕಿ ಚಿಕ್ಕೋಡಿಯಲ್ಲಿ ಗರಿಷ್ಠ 72.75% ರಷ್ಟು , ಗುಲ್ಬರ್ಗದಲ್ಲಿ 57.20% ರಷ್ಟು ಕಡಿಮೆ ಮತದಾನವಾಗಿತ್ತು. ಈ ಸಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಾ ಖರ್ಗೆ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈಶ್ವರಪ್ಪ ಯಡಿಯೂರಪ್ಪ ಸೇರಿ ಅನೇಕರು ಮತದಾನ ಮಾಡಿದ್ರು. ಸಿನಿಮಾ ನಟರು ಸಾಮಾಜಿಕ ಕಾರ್ಯಕರ್ತರು ಸೇರಿ ಅನೇಕ ಗಣ್ಯರು ತಮ್ಮ ಮತದಾನದ ಹಕ್ಕನ್ನ ಚಲಾಯಿಸಿದ್ದಾರೆ. ಇನ್ನು ಬಹುತೇಕ ಎಲ್ಲಾ ಕಡೆ ಶಾಂತಿಯುತ ಮತದಾನ ನಡೆದಿದ್ರೂ ಅಲ್ಲಲ್ಲಿ ಗಲಾಟೆ ಕೂಡ ಆಗಿದೆ. ಮಾನ್ವಿ ತಾಲ್ಲೂಕಿನಲ್ಲಿ ಮುಷ್ಠೂರು ಗ್ರಾಮದಲ್ಲಿ ಕುಡಿಯೋ ನೀರಿಗೆ ಒತ್ತಾಯಿಸಿ ಕೆಲ ಕಾಲ ಮತದಾನವನ್ನ ಗ್ರಾಮಸ್ಥರು ಬಹಿಷ್ಕಾರ ಮಾಡಿದ್ರು. ಮತ್ತೆ ಕೆಲವು ಕಡೆ ಇವಿಎಂ ಸಮಸ್ಯೆ ಕಂಡು ಬಂದಿದೆ. ಇನ್ನು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕೊಪ್ಪದಲ್ಲಿ ಒಂದೇ ಕುಟುಂಬದ 96 ಮಂದಿ ಜೊತೆಯಾಗಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ, ಪತ್ನಿ ಗಾಯತ್ರಿ ಸಿದ್ದೇಶ್ವರ್ ಮತವನ್ನು ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ರಿಂದ ತಾವೇ ಹಾಕಿದ್ದು ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಆಗಿದೆ. ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯ ಮತಗಟ್ಟೆಯಲ್ಲಿ ಘಟನೆ ನಡೆದಿದೆ. ಮತದಾನಕ್ಕೆ ದಂಪತಿ ಸಮೇತರಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಹಾಗೂ ಸಂಸದ ಜಿಎಂ ಸಿದ್ದೇಶ್ವರ್ ಆಗಮಿಸಿದ್ರು. ಈ ವೇಳೆ ಗಾಯತ್ರಿ ಸಿದ್ದೇಶ್ವರ್ ಮತ ಹಾಕೋಕೆ ಕನ್‌ಪ್ಯೂಸ್‌ ಆಗಿದ್ರು. ಅಗ ಪತ್ನಿಗೆ ಸಹಾಯ ಮಾಡೋಕೆ ಹೋಗಿ ಜಿಎಂ ಸಿದ್ದೇಶ್ವರ್ ತಾವೇ ಮತದಾನ ಮಾಡಿದ್ದಾರೆ.

ಇನ್ನು ದೇಶದ ಹಲವು ರಾಜ್ಯಗಳಲ್ಲಿ ಕೂಡ ಮೂರನೇ ಹಂತದ ಮತದಾನ ನಡೆದಿದೆ. ಗುಜರಾತ್‌ ಯುಪಿ ಪಶ್ಚಿಮ ಬಂಗಾಳ ಮಹಾರಾಷ್ಟ್ರ ಸೇರಿ ದೇಶದ 93 ಕ್ಷೇತ್ರಗಳಿಗೆ ಮತದಾನ ಆಗಿದೆ. ಸಂಜೆ 5 ಗಂಟೆವರೆಗೆ ದೇಶಾದ್ಯಂತ 60.9 ಪರ್ಸೆಂಟ್‌ ಮತದಾನ ಆಗಿತ್ತು. ಈ ಪೈಕಿ ಅಸ್ಸಾಂ 74 ಪರ್ಸೆಂಟ್‌, ಗೋವಾ 72 ಪರ್ಸೆಂಟ್‌, ಪಶ್ಚಿಮ ಬಂಗಾಳದಲ್ಲಿ 73 ಪರ್ಸೆಂಟ್‌ ಮತದಾನ ಆಗಿತ್ತು. ಅದನ್ನ ಬಿಟ್ರೆ ಬಿಹಾರದಲ್ಲಿ 56 ಪರ್ಸೆಂಟ್‌, ಚತ್ತೀಸ್‌ಘಢದಲ್ಲಿ 66 ಪರ್ಸೆಂಟ್‌, ಮದ್ಯಪ್ರದೇಶದಲ್ಲಿ 62 ಪರ್ಸೆಂಟ್‌, ಮಹರಾಷ್ಟ್ರದಲ್ಲಿ 53 ಪರ್ಸೆಂಟ್‌ ಮತ್ತು ಯುಪಿಯಲ್ಲಿ 55 ಪರ್ಸೆಂಟ್‌ ಮತದಾನ ಅಗಿತ್ತು. ಇನ್ನು ದೇಶದಲ್ಲಿ ಮೂರನೇ ಹಂತದ ಒಟ್ಟಾರೆ ಮತದಾನ ( SHOW TOTAL TUROUT) ಆಗಿತ್ತು. ಇನ್ನು ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿ ಅನೇಕ ಗಣ್ಯರು ತಮ್ಮ ಮತ ಚಲಾವಣೆ ಮಾಡಿದ್ರು.

-masthmagaa.com

Contact Us for Advertisement

Leave a Reply