ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಕ್ರಿಮಿನಲ್‌ ಪ್ರಕರಣಗಳು ರಿವೀಲ್‌!

masthmagaa.com:

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿರೋ ಅಭ್ಯರ್ಥಿಗಳ ಕುರಿತಂತೆ ಎಡಿಆರ್‌ ಅಥವಾ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಶಾಕಿಂಗ್‌ ಮಾಹಿತಿ ಕೊಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋ ದೇಶದ ಒಟ್ಟು 1625 ಅಭ್ಯರ್ಥಿಗಳ ಪೈಕಿ 1618 ಅಭ್ಯರ್ಥಿಗಳ ಬ್ಯಾಕ್‌ಗ್ರೌಂಡ್‌ ವಿಶ್ಲೇಷಿಸಿ ರಿಪೋರ್ಟ್‌ ನೀಡಿದೆ. ಇದ್ರ ಪ್ರಕಾರ 1618 ಪೈಕಿ ಒಟ್ಟು 500 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಇವೆ. ಇವ್ರಲ್ಲಿ 161 ಅಭ್ಯರ್ಥಿಗಳ ವಿರುದ್ಧ ಸೀರಿಯಸ್‌ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ ಅಂತ ಎಡಿಆರ್‌ ತಿಳಿಸಿದೆ. ಗಮನಿಸಬೇಕಾದ ಅಂಶವಂದ್ರೆ, ಕ್ರಿಮಿನಲ್‌ ಕೇಸ್‌ ಹೊಂದಿರೋ ಒಟ್ಟು 252 ಕ್ಯಾಂಡಿಡೇಟ್ಸ್‌ ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆತಂಕಕಾರಿ ಅಂಶ ಅಂದ್ರೆ 1618 ಅಭ್ಯರ್ಥಿಗಳ ಪೈಕಿ ಒಟ್ಟು 15 ಅಭ್ಯರ್ಥಿಗಳು ತಾವು ಅಪರಾಧ ಮಾಡಿ ಶಿಕ್ಷೆಗೊಳಗಾಗಿರೋ ಬಗ್ಗೆ ಘೋಷಿಸಿಕೊಂಡಿದ್ದಾರೆ. 7 ಅಭ್ಯರ್ಥಿಗಳ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿವೆ. 19 ಕ್ಯಾಂಡಿಡೇಟ್ಸ್‌, ಕೊಲೆ ಪ್ರಯತ್ನ ಕೇಸ್‌ನಲ್ಲಿದ್ದಾರೆ. 35 ಕ್ಯಾಂಡಿಡೇಟ್ಸ್‌ ವಿರುದ್ದ ದ್ವೇಷ ಭಾಷಣ ಕೇಸ್‌, 18 ಅಭ್ಯರ್ಥಿಗಳು ಮಹಿಳೆಯರ ವಿರುದ್ಧ ಅಪರಾಧ ಎಸಗಿರೋ ಪ್ರಕರಣದಲ್ಲಿ ಸಿಲುಕಿದ್ದಾರೆ, ಈ ಪೈಕಿ ಓರ್ವ ಅಭ್ಯರ್ಥಿ ವಿರುದ್ಧ ಅತ್ಯಾಚಾರ ಕೇಸೂ ದಾಖಲಾಗಿದೆ, ಅದನ್ನೂ ಘೋಷಿಸಿಕೊಂಡಿದ್ದಾರೆ. ಇನ್ನು ಪಕ್ಷಗಳ ಆ್ಯಂಗಲ್‌ನಲ್ಲಿ ಹೇಳೋದಾದ್ರೆ, ಬಿಜೆಪಿ ಪಕ್ಷದಿಂದ ಕಣಕ್ಕಿಳಿಯೋ ಅಭ್ಯರ್ಥಿಗಳಲ್ಲಿ ಒಟ್ಟು 36% ಕ್ಯಾಂಡಿಡೇಟ್ಸ್‌ ವಿರುದ್ಧ ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿವೆ. ಕಾಂಗ್ರೆಸ್‌ನಲ್ಲಿ 34%, TMCಯಲ್ಲಿ 40%, AIADMK 36%, DMK 43%, ಸಮಾಜವಾದಿ ಪಾರ್ಟಿ 43% ಮತ್ತು ಬಹುಜನ್‌ ಸಮಾಜ್‌ ಪಾರ್ಟಿಯ ಅಭ್ಯರ್ಥಿಗಳು 13% ಕ್ರಿಮಿನಲ್‌ ಕೇಸ್‌ಗಳನ್ನ ಹೊಂದಿದಾರೆ.

-masthmagaa.com

Contact Us for Advertisement

Leave a Reply