ಹೈಕಮಾಂಡ್‌ ಅಂಗಳಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ರವಾನೆ!

masthmagaa.com:

ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಲು ರಾಜ್ಯದಲ್ಲೂ ಬಿಜೆಪಿ ತಯಾರಿ ನಡೆಸ್ತಿದೆ. ಈ ಸಂಬಂಧ ಇನ್ನೆರಡು ದಿನಗಳಲ್ಲಿ ಆಯಾ ಕ್ಷೇತ್ರಗಳ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯನ್ನ ಹೈಕಮಾಂಡ್‌ಗೆ ಕಳುಹಿಸಲಾವುದು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಇಬ್ಬರು ವೀಕ್ಷಕರು ಆಯಾ ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಆಕಾಂಕ್ಷಿಗಳ ಹೆಸರನ್ನ ಕಲೆಕ್ಟ್‌ ಮಾಡ್ಕೊಂಡು ಬಂದಿದ್ದಾರೆ. ಇನ್ನು ಈ ಆಕಾಕಂಕ್ಷಿಗಳ ಪಟ್ಟಿ ಬಗ್ಗೆ ನಮ್ಮ ಪಕ್ಷದ ರಾಜ್ಯ ಹಿರಿಯ ನಾಯಕರ ಜೊತೆಗೆ ಸಭೆ ನಡೆಸಿ ಚರ್ಚೆ ಮಾಡಲಾಗ್ತಿದೆ. ಅಲ್ದೇ ಈ ಬಾರಿ ಜೆಡಿಎಸ್‌ ಜೊತೆ ಸೇರಿ ರಾಜ್ಯದಲ್ಲಿ 28 ಸ್ಥಾನಗಳನ್ನ ಗೆಲ್ಲುವ ಗುರಿ ಹೊಂದಲಾಗಿದೆ. ಹೀಗಾಗಿ ಯಾವ್ಯಾವ ಕ್ಷೇತ್ರಗಳಿಂದ ಯಾರನ್ನೆಲ್ಲ ಕಣಕ್ಕಿಳಿಸಬೇಕು ಅನ್ನೊದನ್ನ ನಮ್ಮ ಹೈಕಮಾಂಡ್‌ ನಿರ್ಧರಿಸಲಿದೆ ಅಂತ ವಿಜಯೇಂದ್ರ ಹೇಳಿದ್ದಾರೆ. ಇನ್ನು ಈ ಬಾರಿ ಲೋಕಸಭೆ ಚುನಾವಣೆಗೆ ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಮಂಜುನಾಥ್‌ ಅವ್ರ ಸ್ಪರ್ಧೆಗೆ ಸಮ್ಮತಿ ನೀಡೊದಿಲ್ಲ ಅಂತ ಮಾಜಿ ಪ್ರಧಾನಿ HD ದೇವೇಗೌಡ ಹೇಳಿದ್ದಾರೆ. ಅಂದ್ಹಾಗೆ ದೇವೆಗೌಡ್ರರ ಅಳಿಯರಾಗಿರೋ ಈ ಮಂಜುನಾಥ್‌, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿತಾರೆ ಅನ್ನೊ ಮಾತು ಕೇಳಿ ಬಂದಿತ್ತು. ಆದ್ರೆ ಮಂಜುನಾಥ್‌ ಅವ್ರ ಸ್ಪರ್ಧೆ ವಿಚಾರಕ್ಕೆ ಈಗ ದೇವೆಗೌಡರು ಸಮ್ಮತಿ ನೀಡೊದಿಲ್ಲ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply