ಕರ್ನಾಟಕದಲ್ಲಿ ಆಕ್ಸಿಡೆಂಟ್‌: ಲಂಡನ್‌ನಲ್ಲಿ ನ್ಯಾಯ ವಿಚಾರಣೆ

masthmagaa.com:

2002ರಲ್ಲಿ ಭಾರತಕ್ಕೆ ಪ್ರವಾಸಕ್ಕೆ ಬಂದ ಟೈಮಲ್ಲಿ ಕರ್ನಾಟಕದಲ್ಲಿ ಅಪಘಾತಕ್ಕೀಡಾಗಿದ್ದ ದಂಪತಿ KSRTC ವಿರುದ್ಧ ಲಂಡನ್‌ ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ರು. KSRTC ಯಿಂದ ಪರಿಹಾರ ಪಡೆಯಲು ಲಂಡನ್‌ ಕೋರ್ಟ್‌ ದಂಪತಿ ಪರವಾಗಿ ತೀರ್ಪು ನೀಡಿತ್ತು. ಆದ್ರೆ ಇದೀಗ ಲಂಡನ್‌ ಕೋರ್ಟ್‌ನ ಆದೇಶವನ್ನ ಕರ್ನಾಟಕ ಹೈಕೋರ್ಟ್‌ ತಿರಸ್ಕಿರಿಸಿದೆ. ಲಂಡನ್‌ ಕೋರ್ಟ್‌ ನ್ಯಾಯಯುತ ವಿಚಾರಣೆಯನ್ನ ಫಾಲೋ ಮಾಡಿಲ್ಲ. ಕೇಸ್‌ಗೆ ಸಂಬಂಧಪಟ್ಟಂತೆ KSRTC ಪ್ರತಿಕ್ರಿಯೆ ನೀಡಿತ್ತು. ಆದ್ರೆ ವಿಚಾರಣೆ ವೇಳೆ ಕೋರ್ಟ್‌ ಇದನ್ನ ಕನ್ಸಿಡರ್‌ ಮಾಡಿಲ್ಲ. ಹೀಗಾಗಿ ಆ ಆದೇಶವನ್ನ ಇಲ್ಲಿ ಎಕ್ಸಿಕ್ಯೂಟ್‌ ಮಾಡೋಕಾಗಲ್ಲ ಅಂತ ಕರ್ನಾಟಕ ಹೈಕೋರ್ಟ್‌ ಹೇಳಿದೆ. ಅಂದ್ಹಾಗೆ ಮಾರ್ಚ್‌ 2002ರಲ್ಲಿ ನೈಗಲ್‌ ರೋಡರಿಕ್‌ ಹಾಗೂ ಕ್ಯಾರೊಲ್‌ ಅನ್‌ ಹರ್ರಾಡಿನ್‌ ದಂಪತಿ ಮೈಸೂರಿನಿಂದ ಗುಂಡ್ಲುಪೇಟೆಗೆ ಕಾರ್‌ನಲ್ಲಿ ಹೋಗ್ತಿದ್ದಾಗ, KSRTC ಬಸ್‌ಗೆ ಡಿಕ್ಕಿ ಹೊಡೆದು ಆಕ್ಸಿಡೆಂಟ್‌ ಆಗಿತ್ತು. ಬಳಿಕ ಇದರ ವಿರುದ್ದ ಲಂಡನ್‌ ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಿದ್ರು. ಕೋರ್ಟ್‌ ದಂಪತಿ ಪರವಾಗಿ ತೀರ್ಪು ನೀಡಿ, KSRTCಗೆ ಪರಿಹಾರ ನೀಡೋಕೆ ಸೂಚಿಸಿತ್ತು. ಇದೀಗ ವಿಚಾರಣೆ ಸರಿಯಾಗಿ ಆಗಿಲ್ಲ ಅಂತ ಲಂಡನ್‌ ಕೋರ್ಟ್‌ ತೀರ್ಪನ್ನ ರಾಜ್ಯ ಹೈಕೋರ್ಟ್‌ ನಿರಾಕರಿಸಿದೆ.

-masthmagaa.com

Contact Us for Advertisement

Leave a Reply